ಅಪರಾಧಹುಬ್ಬಳ್ಳಿ

ಹುಬ್ಬಳ್ಳಿಯ ಸಂಗಮ ಲಾಡ್ಜ್ ನಲ್ಲಿ “ವೇಶ್ಯಾವಾಟಿಕೆ” ದಂದೇ ಇಬ್ಬರು ಪೊಲೀಸ್ ವಶಕ್ಕೆ..!

Spread the love

ಹುಬ್ಬಳ್ಳಿ:ನಗರದ ಹೃದಯ ಭಾಗದಲ್ಲಿಯೇ ಅಕ್ರಮ ವೇಶ್ಯಾವಾಟಿಕೆ ದಂದೇ ನಡೆಯುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಹುಬ್ಬಳ್ಳಿಯ ಉಪನಗರ ಠಾಣೆಯ ಪೊಲೀಸರು ದಾಳಿಯನ್ನು ಮಾಡಿ ಇಬ್ಬರನ್ನು ಬಂಧಿಸಿದ ಘಟನೆ ಶನಿವಾರ ಮದ್ಯ ರಾತ್ರಿ ಹುಬ್ಬಳ್ಳಿಯಲ್ಲಿ ನಡೆದಿದೆ.

ನಗರದ ಚೆನ್ನಮ್ಮ ಸರ್ಕಲ್ ಮುಂಭಾಗದಲ್ಲಿರುವ ಸಂಗಮ ಲಾಡ್ಜ್ ನ ರೂಮ್ ನಂಬರ್ 201 ರಲ್ಲಿ ಅಕ್ರಮವಾಗಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಉಪನಗರ ಠಾಣೆಯ ಪೊಲೀಸ ಇನ್ಸ್ಪೆಕ್ಟರ್ ರವಿಚಂದ್ರ ದಾಳಿಯನ್ನು ಮಾಡಿ ಇಬ್ಬರನ್ನು ಬಂಧನ ಮಾಡಿದ್ದಾರೆ,ಪೊಲೀಸರು ದಾಳಿಯನ್ನು ಮಾಡುತ್ತಿದ್ದ ಹಾಗೆ ಲಾಡ್ಜ್ ಮ್ಯಾನೇಜರ್ ಹಾಗೂ ಗ್ರಾಹಕರನ್ನು ಕರೆತರುತ್ತಿದ್ದ ಮಹಿಳೆ ಲಾಡ್ಜ್ ನಿಂದ ಎಸ್ಕೇಪ್ ಆಗಿದ್ದಾರೆ.

ಇನ್ನು ಹಳೇ ಬಸ್ ನಿಲ್ದಾಣದ ಬಳಿಯಲ್ಲಿ ಬೇರೆ ಊರುಗಳಿಂದ ಬರುವ ಪುರುಷರನ್ನು ಟಾರ್ಗೆಟ್ ಮಾಡಿ ಹಡುಗಿಯರು ಇದ್ದಾರೆ, ಬೇಕಾ ಎಂದು ಗ್ರಾಹಕರನ್ನು ಕುದುರಿಸಲು ಕೆಲವು ಆಂಟಿಯರು ಹಳೇ ಬಸ್ ನಿಲ್ದಾಣದ ಬಳಿಯಲ್ಲಿ ನಿಂತಿರುತ್ತಾರೆ ಎಂದು ಬೇರೆ ಊರಿನಿಂದ ಬಂದಿದ್ದ ಯುವಕನೊಬ್ಬ ತನಗೆ ಆದ ಅನುಭವವನ್ನು ಹೇಳಿಕೊಂಡಿದ್ದು ಹೀಗೆ.

ಇಷ್ಟು ದಿನಗಳ ಕಾಲ ಬಂದಾಗಿದ್ದ ವೇಶ್ಯಾವಾಟಿಕೆ ಜಾಲದ ದಂದೇ ಮತ್ತೇ ಸದ್ದಿಲ್ಲದೇ ಶುರುವಾಗಿದೆಯಾ ಎಂಬ ಹಲವು ಅನುಮಾನಗಳು ಇದೀಗ ಮತ್ತೆ ಮೂಡಲಾರಂಭಿಸಿದ್ದು,ಹುಬ್ಬಳ್ಳಿ ಪೊಲೀಸರು ಇಂತಹ ಅಕ್ರಮಗಳಿಗೆ ಕಡಿವಾನವನ್ನು ಹಾಕುವ ಕೆಲಸವನ್ನು ಮಾಡಬೇಕಿದೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page