ಅಂತಾರಾಷ್ಟ್ರೀಯ

ಪ್ರೀತಿಯ ಕಾರನ್ನೇ “ಪೀಸ್ ಪೀಸ್” ಮಾಡಿದ ಮಾಲಕ.!ಎಲೆಕ್ಟ್ರಾನಿಕ್ ಕಾರು ತೆಗೆದುಕೊಳ್ಳುವ ಮುನ್ನ..!

Spread the love


ಪಿನ್ಲ್ಯಾಂಡ್: ಕಾರು ಯಾರಿಗೆ ಬೇಡ ಹೇಳಿ ಹದಿಹರೆಯದ ಯುವಸಮೂಹದಿಂದ ಹಿಡಿದು ವೃದ್ಧರ ವರೆಗೂ ಕೂಡಾ ತೆಗೆದುಕೊಳ್ಳಬೇಕು ಎಂಬ ಮಹದಾಶೆಯನ್ನು ಹೊಂದಿರುತ್ತಾನೆ,ಅದರಲ್ಲೂ ವಿಶೇಷವಾಗಿ ತನ್ನ ಪ್ರೀತಿಯ ಕಾರನ್ನು ತನ್ನ ಜೀವಕ್ಕಿಂತಾ ಹೆಚ್ಚಾಗಿ ಪ್ರೀತಿ ಮಾಡೋರನ್ನಾ ನಾವು ನೋಡಿದ್ದೇವೆ…

ಆದ್ರೆ ಇಲ್ಲೊಬ್ಬ ಮಾತ್ರ ತಾನು ಇಷ್ಟಪಟ್ಟು ತೆಗೆದುಕೊಂಡ ಕಾರನ್ನೇ 30ಕೆಜಿ ಡೈನಾಮಿಟ್ ಹಚ್ಚಿ ಉಡಿಸ್ ಮಾಡಿ ಖುಷಿ ಪಟ್ಟಿರೋ ವಿಡಿಯೋ ಇದೀಗ ವೈರಲ್ ಆಗಿದ್ದು,ಯಾಕೆ ಈ ರೀತಿಯಾಗಿ ಮಾಡಿದ್ದಾನೆ ಅಂತಾ ಕೆಲವರು ಪ್ರಶ್ನೆಗೇ ಉತ್ತರ ಇಲ್ಲಿದೆ..

ಪಿನ್ ಲ್ಯಾಂಡ್ ಮೂಲದ ಟುಮಾಸ್ ಕಟೈನೆನ ಎಂಬಾತ ಟೆಸ್ಲಾ ಕಂಪನಿಯ ಬ್ಯಾಟರಿ ಚಾಲಿತ ಕಾರನ್ನು ಖರೀದಿ ಮಾಡಿದ್ದ,ಅದೇ ರೀತಿ ಇಷ್ಟ ಪಟ್ಟ ಕಾರಿನಲ್ಲಿ ಹಲವು ದಿನಗಳ ಕಾಲ ಓಡಾಡಿದ ಆತನಿಗೆ ಕಾರಿನಲ್ಲಿ ಹಲವು ತಾಂತ್ರಿಕ ದೋಷಗಳು ಕಂಡು ಬಂದವು.

ಈ ತಾಂತ್ರಿಕ ದೋಷಗಳನ್ನು ಸರಿಪಡಿಸಿ ಕೊಡಿ ಅಂತಾ ಟುಮಾಸ್ ಟೆಸ್ಲಾ ಕಂಪನಿಗೆ ಹೋಗಿದ್ದಾನೆ,ಆದ್ರೆ ಕಂಪನಿಯವರು ನೀವು ಬ್ಯಾಟರಿ ಫೇಲ್ ಆಗಿದ್ದು ನೀವು ಬ್ಯಾಟರಿ ಸಿಸ್ಟಂ ಚೇಂಜ್ ಮಾಡಿ ಅದಕ್ಕೆ ಇಷ್ಟು ದುಡ್ಡು ಕಟ್ಟಿ ಅಂತಾ ಹೇಳ್ತಾರೆ…

ಆದ್ರೆ ಆ ದುಡ್ಡು ಕಾರಿನ ಮೌಲ್ಯದ ಶೇಕಡಾ 80 ರಷ್ಟು ಆಗಿರತ್ತೆ,ಇದನ್ನೆಲ್ಲಾ ನೋಡಿ ಬೇಜಾರಾದ ಟುಮಾಸ್ ತನ್ನ ಸ್ನೇಹಿತರ ಜೊತೆ ಸೇರಿ ಕಾರಿಗೆ ಡೈನಾಮಿಟ್ ಇಟ್ಟು ತನ್ನ ಪ್ರೀತಿಯ ಕಾರನ್ನು ಉಡಿಸ್ ಮಾಡಿ ಖುಷಿ ಪಟ್ಟಿದ್ದಾನೆ.

ಅಷ್ಟೇ ಅಲ್ಲದೆ ಕಾರನ್ನು ಉಡಿಸ್ ಮಾಡುವ ಚಿತ್ರವನ್ನು ವಿಡಿಯೋ ಮಾಡಿದ್ದು ಅದನ್ನು ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು ಇದೀಗ ಸಕತ್ ವೈರಲ್ ಆಗುತ್ತಿದೆ.

Leave a Reply

Your email address will not be published. Required fields are marked *

Back to top button
Breaking News
HomeHomeHomeHomeSample Page

You cannot copy content of this page