ಹುಬ್ಬಳ್ಳಿ

ಹುಬ್ಬಳ್ಳಿಯ “ಐಸ್ ಕ್ಯೂಬ್ ಪಬ್ & ಬಾರ್” ಗೇ ನೋ ರೂಲ್ಸ್ ರಾತ್ರಿ 2 ಗಂಟೆಯಾದ್ರು ಪಾರ್ಟಿ ಫುಲ್ಲ್ ಜೋರ್..!

Spread the love

ಹುಬ್ಬಳ್ಳಿ:ನಗರದ ಗೋಕುಲ್ ರಸ್ತೆಯಲ್ಲಿರುವ ಐಸ್ ಕ್ಯೂಬ್ ಪಬ್ & ಬಾರ್ ಗೆ ರೂಲ್ಸ್ ಆಂಡ್ ರೆಗ್ಯುಲೇಶನ್ ಇಲ್ಲವೇ ಇಲ್ಲ ಎಂಬಂತಾಗಿದೆ.ಮಧ್ಯ ರಾತ್ರಿ 2 ಗಂಟೆಯಾದ್ರು ಕೂಡಾ ಬಾರ್ ಬಂದ ಮಾಡದೆ ಅಕ್ರಮವಾಗಿ ತಮ್ಮ ವ್ಯಾಪಾರ ವಹಿವಾಟನ್ನು ಕಣ್ಣ ಮುಂದೆ ನಡೆಸುತ್ತಿದ್ದರು ಕೂಡಾ ಪೊಲೀಸ್ ಇಲಾಖೆ ಮಾತ್ರ ಇದಕ್ಕೂ ನಮಗೂ ಸಂಬಂಧವಿಲ್ಲ ಅನ್ನೋ ರೀತಿ ವರ್ತನೆ ತೋರುತ್ತಿದ್ದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ರಾತ್ರಿ 10 ಗಂಟೆಯಾದ್ರೆ ಸಾಕು ಪೊಲೀಸ್ ಇಲಾಖೆಯ ಸಿಬ್ಬಂದಿ ಫುಟ್ಪಾತ್ ಹಾಗೂ ಬೀದಿಬದಿಯಲ್ಲಿ ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ ಲಾಠಿ ತೋರಿಸಿ ಮನೆಗೆ ಕಳುಹಿಸೋದನ್ನಾ ನಾವು ನೀವೆಲ್ಲ ನೋಡಿದ್ದೇವೆ.ಆದ್ರೆ ಗೋಕುಲ್ ರಸ್ತೆಯಲ್ಲಿನ ಐಸ್ ಕ್ಯೂಬ್ ಬಾರ್ ರಾತ್ರಿ 2 ಗಂಟೆವರೆಗೂ ಬಿಂದಾಸಾಗಿ ವ್ಯಾಪಾರ ವಹಿವಾಟನ್ನು ನಡೆಸಿದರು ಕೂಡಾ. ಪೊಲೀಸ್ ಇಲಾಖೆ ಇತ್ತ ಗಮನ ಹರಿಸದೆ ಇರೋದನ್ನು ನೋಡಿದ್ರೆ 2 ಗಂಟೆಯವರೆಗೂ ಇಲ್ಲಿ ಪಾರ್ಟಿ ಮಾಡಲು ಗೋಕುಲ್ ಠಾಣೆಯ ಪೊಲೀಸರೇ ಅವಕಾಶವನ್ನು ಕೊಟ್ಟಂತೆ ಕಾಣಿಸುತ್ತೆ.

ಒಟ್ಟಿನಲ್ಲಿ ರಾತ್ರಿ 2 ಗಂಟೆಯವರೆಗೂ ಬಾರ್ ಓಪನ್ ಇಟ್ಟು ಪಾರ್ಟಿ ಮಾಡಿದ ಐಸ್ ಕ್ಯೂಬ್ ಬಾರ್ ಮಾಲಕ ಹಾಗೂ ಮಧ್ಯ ರಾತ್ರಿವರೆಗೂ ಪಾರ್ಟಿ ಮಾಡುತ್ತಿದ್ದರು ಕೂಡಾ ಅದರ ಗೋಜಿಗೂ ಹೋಗದೆ MM ತಗೊಂಡು ಇತ್ತ ಗಮನ ಹರಿಸದ ಸಿಬ್ಬಂದಿ ಮೇಲೆ ಕಮೀಷನರ್ ರೇಣುಕಾಸುಕುಮಾರ್ ಯಾವ ರೀತಿಯಾದ ಕ್ರಮವನ್ನು ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page