ಹುಬ್ಬಳ್ಳಿ

ಗೋಕುಲ್ ಠಾಣೆಯಲ್ಲಿ “KP ಆಕ್ಟ್” ಹಿಡಿದು “ವಸೂಲಿ” ಮಾಡಲು ಮುಂದಾದ ಮೀಸೆ ಮಾವ… “ಚಾರ್ಲಿ” ಯವರೇ ಇವರ “ಚಾಳಿ” ನಿಮಗೆ ಗೊತ್ತಾ…!?

Spread the love

ಹುಬ್ಬಳ್ಳಿ: ಪೊಲೀಸರು ಅಂದ್ರೆ ಜನರು ಇದೀಗ ನೋಡುವ ನೋಟವೇ ಬದಲಾಗಿ ಹೋಗಿದೆ ಹೀಗಾಗಿ ಕೆಲವು ಬೆರಳೆಣಿಕೆಯಷ್ಟು ಪೊಲೀಸ ಸಿಬ್ಬಂದಿ ಮಾಡುವಂತ ತಪ್ಪು ಗಳಿಂದಾಗಿ ಇಡಿ ಪೊಲೀಸ್ ಇಲಾಖೆಯ ಹೆಸರು ಕೆಡುವಂತಾಗಿದ್ದು. ಒಳ್ಳೆಯ ಪೊಲೀಸರನ್ನು ಕೂಡಾ ಜನರು ಅನುಮಾನದ ನೋಟದಿಂದ ನೋಡುವ ಪರಿಸ್ಥಿತಿಗೆ ಬಂದು ಬಿಟ್ಟಿದೆ.

ಈ ಮಾತಿಗೆ ತಾಜಾ ಉದಾರಣೆಗೆ ಸಾಕ್ಷಿಯಾಗಿದ್ದು ನಮ್ಮ ಹುಬ್ಬಳ್ಳಿಯ ಗೋಕುಲ್ ಠಾಣೆಯ ಪೊಲೀಸ್ ಸಿಬ್ಬಂದಿ. ಈ ಠಾಣೆಯಲ್ಲಿ ಕೆಲವೊಂದಿಷ್ಟು ಸಿಬ್ಬಂದಿಗಳು ಸಾಕಷ್ಟು ಒಳ್ಳೆಯ ಕೆಲಸವನ್ನು ಮಾಡಿದ್ದಾರೆ ಮಾಡುತ್ತಲು ಇದ್ದಾರೆ ಆದ್ರೆ ಈ ಠಾಣೆಯಲ್ಲಿಯೇ ಇರುವ ಒಂದೆರಡು ಸಿಬ್ಬಂದಿಗಳು ಮಾತ್ರ ದುಡ್ಡು ಮಾಡಲು ಅನ್ಯ ಮಾರ್ಗಗಳನ್ನು ಹಿಡಿದು ಇಲಾಖೆಯ ಹೆಸರಿಗೆ ಮಣ್ಣು ಬಳೆಯುವ ಕಾರ್ಯಕ್ಕೆ ಮುಂದಾಗಿದ್ದಾರೆ.

ನಿನ್ನೇ ಗೋಕುಲ್ ರಸ್ತೆಯ ಕ್ವಾಟನ್ ಕಂಟ್ರಿ ಬಳಿ ಇಬ್ಬರು ವ್ಯಕ್ತಿಗಳು ಕಾರಿನಲ್ಲಿ ಕುಳಿತು ಮಧ್ಯಪಾನ ಮಾಡುತ್ತಿದ್ದಾಗ ಗೋಕುಲ್ ಠಾಣೆಯ ಇಬ್ಬರು ಸಿಬ್ಬಂದಿಗಳು ಬಂದು ಹೀಗೆ ಮಾಡೋದು ತಪ್ಪು ನಿಮ್ಮ ಮೇಲೆ ಕೇಸ್ ಹಾಕುತ್ತೇವೆ ಅಂತಾ ಹೆದರಿಸಿದ್ದಾರೆ.ಇನ್ಸ್ಪೆಕ್ಟರ್ ನಿಮ್ಮಂತವರನ್ನು ಸುಮ್ಮನೆ ಬಿಡಬೇಡಾ ಅಂತಾ ಹೇಳಿದ್ದಾರೆ ಅಂತಾ ಹೇಳಿದ್ದಾರೆ ಅಷ್ಟೇ ಅಲ್ಲದೆ ತಮ್ಮ ಬಳಿ ಇದ್ದ ಕೆಪಿ ಆಕ್ಟ್ ಕೊಟ್ಟು ಅವರ ಬಳಿಯಿಂದ 300 ರೂಪಾಯಿ ಇಸಿದುಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ನಗರದ ಹೊರವಲಯದಲ್ಲಿ ಕಾರಿನಲ್ಲಿ ಕುಳಿತು ಈ ವ್ಯಕ್ತಿಗಳು ಮಧ್ಯಪಾನ ಮಾಡಿದ್ದೂ ತಪ್ಪು ಅದನ್ನು ನಾವು ಕೂಡಾ ಒಪ್ಪಲ್ಲ ಆದ್ರೆ ಗೋಕುಲ್ ರಸ್ತೆಯ ತುಂಬೆಲ್ಲ ಇರುವ MRP ಬಾರ್ ಗಳು ಎಲ್ಲ ನಿಯಮಗಳನ್ನು ಮುರಿದು ಬಾರ್ ಆಂಡ್ ರೆಸ್ಟೋರೆಂಟ್ ಆಗಿ ಬದಲಾಗಿದೆ ಇವೆಲ್ಲ ಇರೋದು ಗೋಕುಲ್ ರಸ್ತೆಯಲ್ಲಿಯೇ.ಯಾಕೆ ಇವು ಆ ಪೊಲೀಸರಿಗೆ ಕಂಡಿಲ್ಲವೇ ಎಂಬ ಮಾತುಗಳು ಇದೀಗ ಕೇಳಿ ಬಂದಿವೆ.

ಹೀಗಾಗಿ ನಿನ್ನೇ ಕೆಪಿ ಆಕ್ಟ್ ಕೊಟ್ಟು 300 ರೂಪಾಯಿ ವಸೂಲಿ ಮಾಡಿದ ವಸೂಲಿ ವೀರರು ಯಾರು ಎಂಬುದನ್ನು ಇದೀಗ ಗೋಕುಲ್ ಠಾಣೆಯ ಇನ್ಸ್ಪೆಕ್ಟರ್ ಅವರು ವಿಚಾರಣೆ ಮಾಡಿ ತಪ್ಪಿತ್ತಸ್ತರ ಮೇಲೆ ರಿಪೋರ್ಟ್ ಹಾಕ್ತಾರೋ ಅಥವಾ CP ಆದೇಶ ಬಂದ ಮೇಲೆಯೇ ಅವರ ಮೇಲೆ ರಿಪೋರ್ಟ್ ಹಾಕುತ್ತಾರೋ ಎಂಬುದನ್ನು ಇದೀಗ ಕಾದು ನೋಡಬೇಕಿದೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page