ಹುಬ್ಬಳ್ಳಿ

ನಿಂತ “ರೈಲು” ಜಗ್ಗಿದ “ರಜತ್” ಬಿದ್ದಿದ್ದು ಯಾರು…?

Spread the love

ಹುಬ್ಬಳ್ಳಿ-ಬೆಂಗಳೂರು ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ವಿಶೇಷ ರೈಲು ಸೇವೆ ಪುನರ್ ಆರಂಭದ ಅಭಿಯಾನಕ್ಕೆ ಜಯಸಿಕ್ಕಿದ್ದು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆ ಕೇಂದ್ರ ಸಚಿವರಿಗೆ ರಜತ್ ಉಳ್ಳಾಗಡ್ಡಿಮಠ ಅಭಿನಂದನೆ ತಿಳಿಸಿದ್ದಾರೆ.

ಹುಬ್ಬಳ್ಳಿ-ಬೆಂಗಳೂರು ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲು ಬಂದ್ ಆದ ಹಿನ್ನೆಲೆ ಪ್ರಯಾಣಿಕರು ಸಾಕಷ್ಟು ಸಮಸ್ಯೆ ಅನುಭವಿಸಿದರು. ಇದನ್ನು ಮನಗಂಡು ಪೌನತಿ ಜೋಶಿ ಎಂಬ ಅಭಿಯಾನ ಕೂಡಾ ಆರಂಭಿಸಿ, ಕೇಂದ್ರ ಸಚಿವರಿಗೆ ತಮ್ಮ ಕ್ಷೇತ್ರದ ಹಿತ ಬೇಕಾಗಿಲ್ಲ, ಅವರಿಗೆ ಬೇಕಿರೋದು ರಾಜಕೀಯ ಅಧಿಕಾರ, ಹೀಗಾಗಿಯೇ ರಾಜಸ್ಥಾನಕ್ಕೆ ಅಧಿಕಾರ ಬಳಸಿ ರೈಲು ಕಳಿಸಿಕೊಟ್ಟಿದ್ದಾರೆ. ಶೀಘ್ರ ರೈಲು ಆರಂಭಿಸಬೇಕೆಂದು ಒತ್ತಡ ಹಾಕಲಾಗಿತ್ತು.

ಇದೀಗ ಸಾಕಷ್ಟು ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಹುಬ್ಬಳ್ಳಿ – ಬೆಂಗಳೂರು ಸೂಪರ್‌ ಫಾಸ್ಟ್ ಎಕ್ಸ್ಪ್ರೆಸ್ ವಿಶೇಷ ರೈಲು ಸೇವೆಯನ್ನು ಆರಂಭಿಸಲಾಗಿದ್ದು, ರೈಲ್ವೆ ಅಧಿಕಾರಿಗಳು ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಇನ್ನೂ ರೈಲು ಆರಂಭಕ್ಕೆ ಆರಂಭಿಸಿದ ಅಭಿಯಾನಕ್ಕೆ ಈ ಮೂಲಕ ಜಯಸಿಕ್ಕಂತಾಗಿದೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page