ಹುಬ್ಬಳ್ಳಿ

ಹುಬ್ಬಳ್ಳಿಯಲ್ಲಿ “ಪೊಲೀಸ್ ಅಧಿಕಾರಿಗಳ” ಹೆಸರು ಕೆಡಿಸಲು ಮುಂದಾದ “ಹುಳುಕು” ಮನಸ್ಥಿತಿಯ ಸಿಬ್ಬಂದಿ..!

Spread the love

ಹುಬ್ಬಳ್ಳಿ: ಹುಬ್ಬಳ್ಳಿಯ ಕಸಬಾಪೇಟ್ ಪೊಲೀಸ್ ಠಾಣೆಯಲ್ಲಿ ಮಟ್ಕಾ ವಿಚಾರಕ್ಕೇ ಸಂಬಂದಿಸಿದಂತೆ ಪೊಲೀಸರು ಫೇಕ್ FIR ದಾಖಲು ಮಾಡಿದ್ದಾರೆ ಎಂಬ ಮಾತುಗಳು ಸದ್ಯ ನಗರದಲ್ಲಿ ಸುದ್ದಿ ಆಗುತ್ತಿದ್ದು ಈ ರೀತಿ ಸುದ್ದಿಯಾಗುವುದಕ್ಕೆ ಠಾಣೆಯಲ್ಲಿನ ಕೆಲವು ಹುಳುಕು ಮನಸ್ಥಿತಿಯ ಸಿಬ್ಬಂದಿಯ ಅಸಮದಾನವೇ ಇದಕ್ಕೆಲ್ಲ ಕಾರಣ ಎಂಬ ಮಾಹಿತಿಗಳು ಇದೀಗ ಕೇಳಿಬರಲಾರಂಭಿಸಿವೆ.

ಹುಬ್ಬಳ್ಳಿಯ ಕಸಬಾಪೇಟ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮಟ್ಕಾ ಆರೋಪಿಯ ಮೇಲೆ ಪೊಲೀಸರು FIR ಮಾಡಿದ್ದರು ಅದೇ ರೀತಿಯಾಗಿ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದಾಗ ಆರೋಪಿ ನ್ಯಾಯಾಧೀಶರ ಮುಂದೆ ತಪ್ಪೊಪ್ಪಿಗೆ ನೀಡಿ ದಂಡ ಕೂಡಾ ಕಟ್ಟಿಬಂದಿದ್ದ.ಇದರಲ್ಲೇ ಅರ್ಥ ಆಗತ್ತೆ pek FIR ಆದ್ರೆ ಕೋರ್ಟ್ ನಲ್ಲಿ ನ್ಯಾಯಾಧೀಶರ ಮುಂದೆ ಆರೋಪಿ ಹೇಗೆ ತನ್ನ ತಪ್ಪೊಪ್ಪಿಗೆ ನೀಡುತ್ತಾನೆ.

ಇನ್ನು ಪ್ರತಿಯೊಂದು ಠಾಣೆಯಲ್ಲಿ FIR ಆದಾಗ ಪೊಲೀಸರು ಕಾನೂನು ರೀತಿಯಲ್ಲಿ ಆರೋಪಿಗಳಿಗೆ ಶಿಕ್ಷೆ ಆಗುವ ರೀತಿಯಲ್ಲಿ ಸಮಯ,ಸ್ಥಳ,ವನ್ನು ಹೆಚ್ಚು ಕಡಿಮೆ ಮಾಡಿ ಚಾರ್ಜ್ ಶೀಟ್ ನಲ್ಲಿ ನಮೂದನ್ನು ಮಾಡುತ್ತಾರೆ ಎಂಬುದು ನ್ಯಾಯಾಲಯಕ್ಕೆ ಹಾಗೂ ಕಾನೂನಿನ ಜ್ಞಾನ ಉಳ್ಳ ಎಲ್ಲರಿಗೂ ಗೊತ್ತಿರುವಂತದ್ದೇ. ಆದ್ರೆ ಠಾಣೆಯಲ್ಲಿನ ಹುಳುಕು ಮನಸ್ಥಿತಿಯ ಕೆಲವು ಸಿಬ್ಬಂದಿಗಳು ತಮ್ಮ ಬೆಳೆಯನ್ನು ಬೇಯಿಸಿಕೊಳ್ಳಲು ಠಾಣೆಯಲ್ಲಿನ ಹಂಚಿಕೊಳ್ಳಬಾರದ ವಿಷಯಗಳ್ನು ಹಂಚಿಕೊಳ್ಳಲು ಮುಂದಾಗುತ್ತಿರುವುದರಿಂದ ಈ ರೀತಿಯಾದ ಗುಲ್ಲು ಸದ್ದು ಮಾಡುತ್ತಿದೆ.

ಅಷ್ಟೇ ಅಲ್ಲದೆ ಕಸಬಾಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಕಾಂಗ್ರೆಸ್ ಮುಖಂಡರೊಬ್ಬರು ಸರ್ಕಾರಿ ನೌಕರಿ ಕೊಡಿಸುತ್ತೇನೆ ಎಂದು ಹೇಳಿ ಕೋಟ್ಯಂತರ ರೂಪಾಯಿ ವಂಚನೆ ವಿಷಯ ಮುನ್ನೆಲೆಗೆ ಬರಬಹುದು ಎಂಬ ಕಾರಣಕ್ಕಾಗಿ ಪೊಲೀಸ್ ಅಧಿಕಾರಿಗಳ ಮೇಲೆ ಈ ರೀತಿಯಾದ ಫೇಕ್ FIR ಗುಲ್ಲೆಬ್ಬಿಸಿ. ತಮ್ಮ ಬುಡಕ್ಕೆ ಹತ್ತಬಹುದಾದ ಬೆಂಕಿಯನ್ನು ತಪ್ಪಿಸಿಕೊಳ್ಳಲು ಈ ರೀತಿಯಾದ ಡ್ರಾಮಾ ಬಾಜಿ ಮಾಡುತ್ತಿರೋದು ಕಂಡು ಬಂದಿದೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page