ಹುಬ್ಬಳ್ಳಿ

ಹುಬ್ಬಳ್ಳಿ-ಧಾರವಾಡ “ಟ್ರಾಫಿಕ್” ಪೊಲೀಸರು ಇನ್ನ “ಮ್ಯಾಲ್ ಊಟಾ” ಮಾಡಬಾರ್ದು ಹೊಸ ರೂಲ್ಸ್ ..!

Spread the love

ಹುಬ್ಬಳ್ಳಿ:ಹು-ಧಾ ಪೊಲೀಸ್ ಕಮಿಷನರೇಟ್ ನಲ್ಲಿ ಕರ್ತವ್ಯ ನಿರ್ವಹಿಸುವ ಸಂಚಾರಿ ಪೊಲೀಸರು ಕೆಲ್ಸ್ ಮಾಡಬೇಕು ಅಥವಾ ಕೆಲ್ಸಾ ಬಿಟ್ಟು ಹೋಗಬೇಕೋ ಎನ್ನುವ ಸ್ಥಿತಿಗೆ ಟ್ರಾಫಿಕ್ ಸಿಬ್ಬಂದಿಗಳು ಬಂದಿದ್ದು. ಇದಕ್ಕೆ ಕಾರಣವಾಗಿದ್ದು ಹಿರಿಯ ಅಧಿಕಾರಿಗಳ ಕೇಸ್ ಮಾಡುವಂತೆ ಒತ್ತಾಯ ಹಾಕುತ್ತಿದ್ದಾರೆ ಎಂಬ ಆರೋಪಗಳು ಇದೀಗ ಕೇಳಿ ಬರುತ್ತಿದೆ.

ಇಂದು ಕೂಡಾ ಸಂಚಾರಿ ಪೊಲೀಸರಿಗೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನೀಡುವಂತೆ ಅಧಿಕಾರಿಗಳು ಕೂಡಾ ಸಿಬ್ಬಂದಿಗಳಿಗೆ ಟಾಸ್ಕ್ ಕೊಡುತ್ತಿದ್ದು ಇದೀಗ ಟಾಸ್ಕ್ ನಿಂದಾಗಿ ಸಂಚಾರಿ ಪೊಲೀಸರು ಹೈರಾಣಾಗಿ ಟ್ರಾಫಿಕ್ ಡಿವಿಷನ್ ಬೇಡ ಅನ್ನೋ ಸ್ಥಿತಿಗೆ ಬಂದಿದ್ದಾರೆ.

ಇಂದು ವೈರಲೇಸ್ ನಲ್ಲಿ ಸಂಚಾರಿ ಪೊಲೀಸರಿಗೆ ಮಾಧ್ಯಹ್ನದ ಹೊತ್ತಿನೊಳಗೆ ಪ್ರತಿಯೊಬ್ಬ ASI ಸಿಬ್ಬಂದಿ 25 ಕೇಸ್ ಮಾಡಲೇಬೇಕು,25 ಕೇಸ್ ಆಗುವವರೆಗೂ ಯಾರು ಕೂಡಾ ಊಟಕ್ಕೆ ಹೋಗುವಂತಿಲ್ಲ ಅಂತಾ ವೈರಲೇಸ್ ಮೂಲಕ ಸೂಚನೆ ಮಾಡುತ್ತಿದ್ದು ಇದರಿಂದ ಬಿಪಿ,ಶುಗರ್,ಇರುವ ಪೊಲೀಸರು ಹೈರಾನಾಗಿದ್ದು ಪೊಲೀಸ್ ನೌಕರಿ ಸಾಕೋ ಮಾರಾಯ ಎನ್ನುವ ಹಂತಕ್ಕೆ ಹೋಗಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಸಂಚಾರಿ ಪೊಲೀಸರು ದಂಡ ಹಾಕುವಾಗ ಸಾರ್ವಜನಿಕರೊಡನೆ ಪ್ರತಿನಿತ್ಯ ಜಗಳ,ವಾಗ್ವಾದ ಮಾಡಿ ಮಾಡಿ ತಮ್ಮ ಆಯಸ್ಸನ್ನು ಕಡಿಮೆ ಮಾಡಿಕೊಳ್ಳುತ್ತಿದ್ದು ಇದರ ನಡುವೆ ಅಧಿಕಾರಿಗಳು ಕೂಡಾ ಈ ರೀತಿಯಾಗಿ ಕಡ್ಡಾಯ ಟಾಸ್ಕ್ ನೀಡಿದರೆ ಹೇಗೆ ಕರ್ತವ್ಯ ನಿರ್ವಹಿಸ ಬೇಕು ಅಂತಾ ಇದೀಗ ಚಿಂತೆಗೆ ಈಡಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page