ಹುಬ್ಬಳ್ಳಿಯಲ್ಲಿ “ಭೀಕರ” ಅಪಘಾತ ಸ್ಥಳದಲ್ಲೇ “ಕಾಲೇಜು ವಿದ್ಯಾರ್ಥಿನಿ” ಸಾವು.
ಹುಬ್ಬಳ್ಳಿ:ಬೈಕ್ ಹಾಗೂ ಟಿಪ್ಪರ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಓರ್ವ ಯುವತಿ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಹುಬ್ಬಳ್ಳಿಯ ಎಪಿಎಂಸಿ ಯ ಮೂರನೇ ಗೇಟ್ ಬಳಿಯಲ್ಲಿ ಇಂದು ಬೆಳ್ಳಿಗ್ಗೆ ನಡೆದಿದೆ.
ನವನಗರ ಕಡೆಯಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಡಿಯೋ ಬೈಕ್ ಗೆ ಹಿಂಬದಿಯಿಂದ ಅತಿವೇಗವಾಗಿ ಬಂದ ಟಿಪ್ಪರ್ ಬೈಕ್ ಗೆ ಗುದ್ದಿ ಪರಾರಿಯಾದ ಪರಿಣಾಮ ಬೈಕ್ ನಲ್ಲಿದ್ದ ಓರ್ವ ಸವಾರ ಪ್ರಾಣಾಪಾಯದಿಂದ ಪಾರಾಗಿ ಬೈಕ್ ಹಿಂಬದಿ ಕೂತಿದ್ದ ಗಂಗಾ ಎಂಬ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಹುಬ್ಬಳ್ಳಿಯ ಉತ್ತರ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿದ್ದು ಮೃತಪಟ್ಟ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಶವಾಗಾರಕ್ಕೆ ರವಾನೆ ಮಾಡಿ,ಅಪಘಾತ ಮಾಡಿ ಪರಾರಿಯಾಗಿರುವ ಟಿಪ್ಪರ್ ಪತ್ತೆಗೆ ಮುಂದಾಗಿದ್ದಾರೆ.