ಹುಬ್ಬಳ್ಳಿ

ಹುಬ್ಬಳ್ಳಿಯಲ್ಲಿ ಮತ್ತೇ ಸದ್ದಿಲ್ಲದೇ “ಸ್ಟಾರ್ಸ್ಟ್” ಆದ “ವರ್ಗಾವಣೆ” ದಂದೇ ..! MLA &MLC ಗಳ ಮಿನಿಟ್ಸ್ ಯೂಸ್..!?

Spread the love

ಹುಬ್ಬಳ್ಳಿ:ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆಲವೊಂದಿಷ್ಟು ಪೊಲೀಸ್ ಸಿಬ್ಬಂದಿಗಳನ್ನು ಆಡಳಿತಾತ್ಮಕ ಹಿತ ದೃಷ್ಟಿಯಿಂದ ಈ ಹಿಂದೆ ಇದ್ದ ಕಮೀಷನರ್ ಸಂತೋಷ್ ಬಾಬು ಅವರು ಹುಬ್ಬಳ್ಳಿ ನಗರದರಿಂದ ಧಾರವಾಡ ನಗರಕ್ಕೆ ವರ್ಗಾವಣೆ ಮಾಡಿದ್ದರು.

ಅವರು ಇರುವ ವರೆಗೂ ಕೂಡಾ ಮತ್ತೇ ಅವರು ಹುಬ್ಬಳ್ಳಿಯತ್ತ ಬರುವ ಕನಸನ್ನು ಕಂಡಿರಲಿಲ್ಲ, ಆದ್ರೆ ಇದೀಗ ಅವರ ವರ್ಗಾವಣೆ ನಂತರ ಮತ್ತೆ ಕೆಲವೊಂದಿಷ್ಟು ಸಿಬ್ಬಂದಿಗಳು ಧಾರವಾಡದಿಂದ ಹುಬ್ಬಳ್ಳಿಯತ್ತ ಬರಲು ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ.ಮೊದಲೆಲ್ಲ ಇನ್ಸ್ಪೆಕ್ಟರ್ ಅವರ ವರ್ಗಾವಣೆಗೆ ಬಳಕೆ ಆಗುತ್ತಿದ್ದ MLA ಗಳ ಮಿನೀಟ್ಸ್ ಗಳು ಇದೀಗ ಕಾನ್ಸ್ಟೇಬಲ್ ಲೇವಲ್ ಗಳ ವರೆಗೂ ಕೂಡಾ ಇಳಿದು ಬಿಟ್ಟಿದೆ.

MLA ಹಾಗೂ MLC ಗಳು ನೀಡಿದ ಲೆಟರ್ ಗಳನ್ನು ಕೊಟ್ಟು ನಮಗೆ ಮತ್ತೆ ಹುಬ್ಬಳ್ಳಿ ನಗರಕ್ಕೆ ವರ್ಗಾವಣೆ ಮಾಡಿ ಅಂತಾ ಈಗಿರುವ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ಅವರ ಮೇಲೆ ಒತ್ತಡ ಹಾಕಲಾಗುತ್ತಿದೆ ಎಂಬ ಮಾತುಗಳು BRTS ಬಸ್ ಉದ್ದಕ್ಕೂ ಕೇಳಿ ಬರುತ್ತಿದೆ.ಆದ್ರೆ ಮಾಹಿತಿ ಪ್ರಕಾರ ಕಮೀಷನರ್ ಕಛೇರಿಯಲ್ಲಿನ ಕೆಲವರು ತಮ್ಮ-ತಮ್ಮ ವೈಯಕ್ತಿಕ ಲಾಭಕ್ಕೆ ವರ್ಗಾವಣೆ ಪಟ್ಟಿ ರೆಡಿ ಮಾಡಿ ಕಮೀಷನರ್ ಮುಂದೆ ಇಟ್ಟಾಗ ಮೇಡಂ ಈ ರೀತಿಯಾದ ವರ್ಗಾವಣೆ ಮಾಡೋದಿಲ್ಲ ಅಂತಾ ಖಡಕ್ ವರ್ನಿಂಗ್ ನೀಡಿದ್ದಾರಂತೆ..?

ನಿಜವಾಗಿಯೂ ಕೆಲವು ಸಿಬ್ಬಂದಿಗಳಿಗೆ ವೈಯಕ್ತಿಕ ಹಾಗೂ ಆರೋಗ್ಯಕ್ಕೆ ಸಂಬಂದಿಸಿದಂತೆ ಕೆಲವು ಸಮಸ್ಯೆಗಳಿದ್ದರೆ ಅಂತಹ ಸಿಬ್ಬಂದಿಗಳನ್ನು ಕರೆಯಿಸಿ ಪರಿಶೀಲನೆ ಮಾಡಿ ಅವರಿಗೆ ವರ್ಗಾವಣೆ ಮಾಡೋದು ಒಪ್ಪುವಂತಹ ಮಾತು,ಆದ್ರೆ ಕೆಲವು ಸಿಬ್ಬಂದಿಗಳು ಅಮಾಯಕರನ್ನು ಹೆದರಿಸಿ ಬೆದರಿಸಿ ಇನ್ಸ್ಪೆಕ್ಟರ್ ಗಳಿಗೆ 161 ಮಾಡಿ ಅದರಲ್ಲಿ ತಾವು ಕೂಡಾ ಪಾಲುದಾರರಾಗಲು ರಾಜಕೀಯ ಮುಖಂಡರಿಂದ ವರ್ಗಾವಣೆ ಸಲುವಾಗಿ ಒತ್ತಡ ಹಾಕುವ ಸಿಬ್ಬಂದಿಗಳಿಗೆ ಕಮೀಷನರ್ ಮೇಡಂ ಏನು ಮಾಡ್ತಾರೆ ಎಂಬುದು ಅವಳಿ ನಗರದ ಪ್ರಜ್ಞಾವಂತರ ಪೊಲೀಸರ ಪ್ರಶ್ನೆಯಾಗಿದೆ.

ಅಷ್ಟೇ ಅಲ್ಲದೆ ಇಂತಹ ಸಿಬ್ಬಂದಿಗಳಿಗೆ ಮಿನೀಟ್ಸ್ ಕೊಡುವಂಥ ರಾಜಕೀಯ ಮುಖಂಡರಿಗೂ ಕೂಡಾ ಕಿಂಚಿತ್ತೂ ಆತ್ಮಾಭಿಮಾನ ಎಂಬುದು ಇಲ್ಲವೇ,ಅವಳಿ ನಗರದಲ್ಲಿ ಅಮಾಯಕರ ರಕ್ತವನ್ನು ಹೀರುವ ಇಂತಹ ಸಿಬ್ಬಂದಿಗಳಿಗೆ ಹೇಗೆ ಮಿನೀಟ್ಸ್ ಕೊಡ್ತಾರೆ ಕೊಡುವ ಮುನ್ನ ಆತ ಹೇಂಗೆ ಕೆಲ್ಸ್ ಮಾಡ್ತಾನೆ ಅನ್ನೋದು ಸಾರ್ವಜನಿಕರ ಬಳಿ ಅಭಿಪ್ರಾಯ ಕೇಳುವ ಕಾಮನ್ ಸೆನ್ಸ್ ಕೂಡಾ ಇಲ್ಲದಂತಾಗಿದ್ದು ಇವರ ಹೊಲಸು ರಾಜಕೀಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page