ಹುಬ್ಬಳ್ಳಿ

ಹುಬ್ಬಳ್ಳಿಯಲ್ಲಿ “ಜೋಡಿಗಳ” ಫೋಟೋ ತೆಗೆದು “ಹಣ ವಸೂಲಿ” ಮಾಡಲು ಮುಂದಾದ “ಕಾನ್ಸ್ಟೇಬಲ್”…!

Spread the love

ಹುಬ್ಬಳ್ಳಿ:ನಗರದ ಹೊರವಲಯದಲ್ಲಿ ಆಗಮಿಸುವ ಪ್ರೇಮಿಗಳನ್ನೇ ಟಾರ್ಗೆಟ್ ಮಾಡಿ ಹಣ ಸುಲಿಯುವ ಕಾಯಕಕ್ಕೆ ಇದೀಗ ಪೊಲೀಸ್ ಕಾನ್ಸ್ಟೇಬಲ್ ಇಳಿದು ಇಲಾಖೆಯ ಮಾನ ಮರ್ಯಾದೆ ತೆಗೆಯಲು ಮುಂದಾಗಿರೋದನ್ನು ವಿಮಾನದಲ್ಲಿ ಹಾರಾಡುವ ಜನ ಆಗಸದಿಂದಲೇ ನೋಡುವಂತಾಗಿದೆ.

ವಿಮಾನ ಇಳಿಯುವ ಸ್ಥಳದ ಪಕ್ಕದಲ್ಲಿಯೇ ಇರುವ ಸ್ಥಳಗಳಿಗೆ ಕಾರಿನಲ್ಲಿ ಆಗಮಿಸುವ ಜೋಡಿಗಳನ್ನು ನೋಡಿ ಕಾನ್ಸ್ಟೇಬಲ್ ಒಬ್ಬ ಕಾರಿನ ಹಾಗೂ ಕಾರಿನಲ್ಲಿದ್ದ ಯುವಕ ಹಾಗೂ ಯುವತಿಯ ಫೋಟೋ ತೆಗೆದುಕೊಂಡು,ಕಾರ ನಂಬರ ಮೂಲಕ ನಿಮ್ಮ ಮನೆಯ ವಿಳಾಸ ಪತ್ತೆ ಮಾಡಿ ನಿಮ್ಮ ಫೋಟೋಗಳನ್ನು ನಿಮ್ಮ ಮನೆಯವರಿಗೆ ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕಿ. ಅವರಿಂದ ಹಣವನ್ನು ದೋಚುವ ನೀಚ ಕಾಯಕ ಹಲವು ದಿನಗಳಿಂದ ನಡೆಸಿಕೊಂಡು ಬಂದಿದ್ದು. ಅನಂತ ಗ್ರ್ಯಾಂಡ್ ಬಳಿ ಜೋಡಿಗಳಿಬ್ಬರನ್ನು ಹೆದರಿಸಿ 3000 ಸಾವಿರ ಹಣವನ್ನು ಪೀಕಿದ್ದಾನೆ ಅಂತೆ.

ಏಕಾಂತದಲ್ಲಿ ಇರುವ ಜೋಡಿಗಳನ್ನೇ ಟಾರ್ಗೆಟ್ ಮಾಡುವ ಈ ಕಾನ್ಸ್ಟೇಬಲ್ ಕಾಟ ಇದೀಗ ವೀಪರಿತವಾಗಿದೆ ಆದ್ರೆ ಜೋಡಿಗಳು ಮಾತ್ರ ಮಾನ ಮರ್ಯಾದೆಗೆ ಅಂಜಿ ಈ ವಿಷಯ ಯಾರಿಗೂ ಹೇಳಲು ಹೋಗಿಲ್ಲ, ಹೀಗಾಗಿ ಈ ಕಾನ್ಸ್ಟೇಬಲ್ ಆಟಾಟೋಪ ಎಗ್ಗಿಲ್ಲದೆ ಸಾಗಿದೆ.

ಈ ವಿಚಾರಕ್ಕೇ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಿ ಇಲಾಖೆಯ ಮಾನವನ್ನು ಗೊತ್ತಿಲ್ಲದೆ ಹಾರಾಜು ಹಾಕುತ್ತಿರುವ ಈತನನ್ನು ಏರೋಪ್ಲೇನ್ ಮೂಲಕ ಹಿರಿಯ ಅಧಿಕಾರಿಗಳು ಸರಿಯಾದ ಜಾಗಕ್ಕೆ ಕಳಿಸುವ ಕಾರ್ಯವನ್ನು ಮಾಡದೆ ಹೋದಲ್ಲಿ ಇಲಾಖೆಯ ಮಾನವನ್ನು ವಿಮಾನದಲ್ಲಿ ಹಾರಾಡುವ ಜನ ನೋಡಿ ಎಲ್ಲೆಡೆ ಹರಾಜು ಹಾಕುವುದರಲ್ಲಿ ಅನುಮಾನವೇ ಇಲ್ಲ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page