ಹುಬ್ಬಳ್ಳಿ

“ಕ್ರಿಕೆಟ್ ಬೆಟ್ಟಿಂಗ್” ಆಡುವ ಸಲುವಾಗಿ “ರೋಡ್’ನಲ್ಲಿ ಡ್ರೈವರ್”ಗಳಿಂದ “ರಾಬರಿ” ಮಾಡಲು ರಸ್ತೆಗಿಳಿದ ASI..!?

Spread the love

ಹುಬ್ಬಳ್ಳಿ:ನಗರದ ಠಾಣೆಯೊಂದರಲ್ಲಿ ASI ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯೊಬ್ಬರು ವಿಶ್ವ ಕಪ್ ಕ್ರಿಕೆಟ್ ನಲ್ಲಿ ಬೆಟ್ಟಿಂಗ್ ಆಡಿ ತಾವು ಮಾಡಿದ ಸಾಲವನ್ನು ತೀರಿಸಲು ಮುಂದಾಗಿದ್ದಾರೆ ಅಂತಾ ರಿಂಗ್ ರೋಡ್ ಸುತ್ತಮುತ್ತ ಓಡಾಡುವ ವಾಹನಗಳು ಇದೀಗ ಹೇಳುತ್ತಿವೆ.

ನಗರದ ಠಾಣೆಯೊಂದರಲ್ಲಿ ಹವಾಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಈ ಸಿಬ್ಬಂದಿ ಆಗಲು ಕೂಡಾ ಇಂಥದೇ ಕೆಲಸವನ್ನು ಮಾಡುತ್ತಿದ್ದ ಹು-ಧಾ ಬೈಪಾಸ್ ನಲ್ಲಿ ಓಡಾಡುವ ವಾಹನಗಳನ್ನು ತನ್ನ ಹೀರೋ ಹೋಂಡಾ ಪ್ಯಾಷನ್ ಬೈಕ್ ನಲ್ಲಿ ಬೆನ್ನತ್ತಿ ಚಾಲಕರಿಂದ ಹಣ ವಸೂಲಿ ಮಾಡಿ ಜೇಬಿಗೆ ಇಳಿಸುತ್ತಿದ್ದ.

ಆದ್ರೆ ಬುದ್ದಿ ಕಲಿಯದ ಈ ಆಸಾಮಿ ಪ್ರಮೋಷನ್ ಪಡೆದುಕೊಂಡು ಭುಜಕ್ಕೆ 1 ಸ್ಟಾರ್ ಏರಿಸಿಕೊಂಡರು ಕೂಡಾ ಮತ್ತೇ ತನ್ನ ಹಳೇ ಚಾಳಿಯನ್ನು ಮುಂದುವರೆಸಿದ್ದಾನೆ.ಈತನ ಬಗ್ಗೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಗಮನ ಹರಿಸಿ ರಸ್ತೆಯಲ್ಲಿಯೇ ಚಾಲಕರಿಂದ ರಾಬರಿ ಜೊತೆಗೆ ಈತನ ತಲೆಯಲ್ಲಿ ಹೊಕ್ಕಿರುವ ಬೆಟ್ಟಿಂಗ್ ಭೂತವನ್ನು ತೆಗೆಯುವುದರ ಮೂಲಕ ಈತನನ್ನು ಶಾಂತ ಮಾಡುವ ಕಾರ್ಯವನ್ನು ಮಾಡಬೇಕಿದೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page