ಹುಬ್ಬಳ್ಳಿಯ “ಸೆಂಟ್ರಲ್ 73″ರ ವಿಧಾನಸಭಾ ಕ್ಷೇತ್ರಕ್ಕೆ “ಅನಿಲ್ ಕುಮಾರ್ ಪಾಟೀಲ್ FIX..!
ಹುಬ್ಬಳ್ಳಿ: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಹುಬ್ಬಳ್ಳಿಯ ಸೆಂಟ್ರಲ್ 73ರ ವಿಧಾನಸಭಾ ಕ್ಷೇತ್ರದಿಂದ ಪ್ರತಿನಿಧಿಸುವ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಗೂಡ್ಸ್ ರೈಲಿನ ಬೋಗಿಯ ತರ ಬೆಳೆಯುತ್ತಲೇ ಇತ್ತು ಆದ್ರೆ ಇದೀಗ ಕಾಂಗ್ರೆಸ್ ನ ಮುಖಂಡರು ಇದೀಗ ಈ ರೈಲಿನ ಬೋಗಿಗಳಿಗೆಗೆ ಬ್ರೇಕ್ ಹಾಕಿ ಇಂಜಿನ್ ಗೆ ಪ್ರಾಮುಖ್ಯತೆ ಕೊಡಲು ಮುಂದಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಹುಬ್ಬಳ್ಳಿಯ ಸೆಂಟ್ರಲ್ 73ರ ವಿಧಾನಸಭಾ ಕ್ಷೇತ್ರದಲ್ಲಿ ಗೂಡ್ಸ್ ರೈಲಿನ ಬೋಗಿಯ ರೀತಿಯಲ್ಲಿ ಹಲವು ಸ್ವಯಂ ಘೋಷಿತ ಕಾಂಗ್ರೆಸ್ ಮುಖಂಡರುಗಳು ನಾನೇ ಅಭ್ಯರ್ಥಿ ಎಂದು ಹೇಳಿಕೊಂಡು ತಿರುಗುವ ಕೆಲಸವನ್ನು ಬಿಟ್ಟರೆ ಪಕ್ಷವನ್ನು ಸಂಘಟನೆ ಮಾಡುವ ಕಾರ್ಯಕ್ಕೆ ಯಾರು ಮುಂದಾಗುತ್ತಿಲ್ಲ.
ಆದ್ರೆ ದಿನನಿತ್ಯವೂ ಕೂಡಾ ಗೂಡ್ಸ್ ರೈಲಿನ ಇಂಜಿನ್ ಬೋಗಿಯನ್ನು ಎಳೆಯುವ ಹಾಗೆ ಧಾರವಾಡ ಜಿಲ್ಲೆ ಸೇರಿದಂತೆ ಸೆಂಟ್ರಲ್ 73ರ ವಿಧಾನಸಭಾ ಕ್ಷೇತ್ರದಲ್ಲಿ ರೀತಿಯಲ್ಲಿ ಹಗಲು ರಾತ್ರಿ ಕೆಲ್ಸ ಮಾಡುತ್ತಾ ಪಕ್ಷ ಸಂಘಟನೆ ಮಾಡುತ್ತಿರೋ ಅನಿಲ ಕುಮಾರ್ ಪಾಟೀಲ್ ಗೆ ಕಾರ್ಯವನ್ನು ತೆರೆ ಮರೆಯಲ್ಲಿಯೇ ವೀಕ್ಷಣೆ ಮಾಡುತ್ತಿರೋ ಕಾಂಗ್ರೆಸ್ ಹೈ ಕಮಾಂಡ್.
ಬೋಗಿಗಳನ್ನು ಬಿಟ್ಟು ಇಂಜಿನ್ ತರಾ ಕೆಲ್ಸ್ ಮಾಡುತ್ತಿರೋ ಅನಿಲ್ ಕುಮಾರ್ ಪಾಟೀಲ್ ಗೆ ಟಿಕೆಟ್ ಕೊಡಲು ಮುಂದಾಗಿದ್ದು.ಸೆಂಟ್ರಲ್ 73ರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಹೈಕಮಾಂಡ್ ಅಧಿಕೃತವಾಗಿ ಘೋಷಣೆ ಮಾಡುವುದೊಂದೆ ಬಾಕಿ ಇದೆ.