ಹುಬ್ಬಳ್ಳಿ

ಹುಬ್ಬಳ್ಳಿಯಲ್ಲಿ ಸದ್ದಿಲದೇ ಶುರುವಾದ್ವಾ ಅಂದರ್-ಬಾಹಾರ್ ಕ್ಲಬ್ ‘ಗಳು..? ಮೂರರ ಜೊತೆ ಮತ್ತೊಂದು..!

Spread the love

ಹುಬ್ಬಳ್ಳಿ:ನಗರದಲ್ಲಿ ಕ್ರೈಂಗಳಿಗೆ ಕಡಿವಾಣ ಹಾಕಿ ಕ್ರೈಂ ಕಂಟ್ರೋಲ್ ಮಾಡಬೇಕಾದ ಪೊಲೀಸ್ ಅಧಿಕಾರಿಗಳೆ ಇದೀಗ ಕ್ರೈಂ ಮಾಡುವ ಕಿರಾತಕರ ಬೆನ್ನಿಗೆ ನಿಂತಿದ್ದಾರೆಯೇ ಎಂಬ ಹಲವು ಅನುಮಾನಗಳು ಇದೀಗ ಇಳಿ ಜಾರಿನ ರೀತಿಯಲ್ಲಿ ಹರಿದು ಬರುವ ನೀರಿನ ತರನಾಗಿ ಆಗಿದೆ ಅಂತಾ ಕಂಡು ಬರುತ್ತಿದೆ.

ನಗರದ ಪ್ರಮುಖ ಪ್ರದೇಶಗಳಲ್ಲಿ ಮೂರರ ಜೊತೆ ಮತ್ತೊಂದು ಸೇರಿದ ಅಜ್ಞಾತ ಸ್ಥಳದಲ್ಲಿ ಕ್ಲಬ್ ಹೆಸರಲ್ಲಿ ಸಲೀಸಾಗಿ ಜೂಜಾಟ ನಡೆಸಲಾಗುತ್ತಿದ್ದು,ಇದಕ್ಕೆ ಹಿರಿಯ ಅಧಿಕಾರಿಗಳು ಸಾಥ್ ನೀಡಿದ್ದಾರೆ ಎಂಬ ಅನುಮಾನ ಇದೀಗ ಮೂಡಲಾರಂಭಿಸಿದೆ.

ಆ ಏರಿಯಾದಲ್ಲಿ ತನ್ನ ಪ್ರಭಾವವನ್ನು ಹೊಂದಿರುವ ಸಿಬ್ಬಂದಿಯೊಬ್ಬ ನೀವೇನು ಟೆನ್ಷನ್ ತಗೋಬೇಡಿ ನಾನು ಎಲ್ಲವನ್ನು ಮೆಂಟೇನ್ ಮಾಡ್ತೀನಿ ಅಂತಾ ಹೇಳಿ ಕ್ಲಬ್ ಗಳಿಗೆ ಪರ್ಮಿಶನ್ ಕೊಡಿಸಿದ್ದಾರೆ ಅಂತೆ,ಆದ್ರೆ ಇವುಗಳಿಗೆ ಕಡಿವಾಣ ಹಾಕಬೇಕಾದ ಹಿರಿಯ ಅಧಿಕಾರಿ ಮಾತ್ರ ಗೊತ್ತಿದ್ದೂ GST ಪಡೆದು ಸುಮ್ಮನಿದ್ದಾರೋ ಅಥವಾ ಗೊತ್ತಿಲ್ಲದೆ ಸುಮ್ಮನಿದ್ದಾರೋ ಎಂಬ ಹಲವು ಪ್ರಶ್ನೆ ಮೂಡಿದೇ.

ಕೆಲವು ಮಾಹಿತಿಗಳ ಪ್ರಕಾರ ಠಾಣಾಧಿಕಾರಿ ಹಾಗೂ ಅವರ ಮೇಲಿನ ಅಧಿಕಾರಿಗೆ ಎಲ್ಲವೂ ಸೆಟ್ ಆಗಿದೆ ಅಂತಾ ಸೆಟ್ಲ್ ಮಾಡಿದ ಆಸಾಮಿ ಎಲ್ಲೆಡೆ ಹೇಳಿಕೊಂಡು ತಿರುಗಾಡುತ್ತಿದ್ದು,ಇದು ನಿಜವೋ ಸುಳ್ಳೋ ಎಂಬ ಮಾಹಿತಿಯನ್ನು ಹಿರಿಯ ಅಧಿಕಾರಿಗಳ ತನಿಖೆಯಿಂದ ತಿಳಿದು ಬರಬೇಕಿದೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page