ಹುಬ್ಬಳ್ಳಿ
‘ಚಾರ್ಲಿ’ಗೆ ಗೊತ್ತಿಲ್ಲದೇ “2.20” ಲಕ್ಷ ಡೀಲ್ ಮಾಡಿದ “PSI & ಗ್ಯಾಂಗ್”..!?
ಹುಬ್ಬಳ್ಳಿ :ಅವಳಿ ನಗರದಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಬೇಕಾದ ಪೊಲೀಸ್ ಇಲಾಖೆಯಲ್ಲಿನ ಕೆಲವೊಂದಿಷ್ಟು ಸಿಬ್ಬಂದಿಗಳು ಅಕ್ರಮ ಮಾಡುವರಿಂದಲೇ ಡೀಲ್ ಕುದುರಿಸಿಕೊಂಡು ಸಮಾಜದಲ್ಲಿ ಎಗ್ಗಿಲದೇ ಅಕ್ರಮ ನಡೆಸಲು ಪರವಾನಿಗೆ ನೀಡುತ್ತಿದ್ದಾರೆ.
ಅದಕ್ಕೆ ಪುಷ್ಟಿ ಕೊಡುವಂತೆ ಅವಳಿ ನಗರದ ಠಾನೆಯೊಂದರಲ್ಲಿ ನಡೆದಿದ್ದ ಪ್ರಕಾರಣಕ್ಕೆ ಸಂಬಂಧಿಸಿದಂತೆ ಆರೋಪಿಯಿಂದ 2.20ಲಕ್ಷ ರೂಪಾಯಿ ಡೀಲ್ ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ಇದರಲ್ಲಿ ಮಾತನಾಡುವ ಪೊಲೀಸ್ ಸಿಬ್ಬಂದಿ ನೀವು ದುಡ್ಡನ್ನು ನನಗೆ ಕೊಟ್ಟಿಲ್ಲ ಅದು ಅಧಿಕಾರಿಗೆ ಹೋಗಿದೆ ಅಂತೆಲ್ಲಾ ಮಾತನಾಡಿದ್ದು ಈಗ ಆ ದುಡ್ಡು ತಿಂದ ಅಧಿಕಾರಿ ಯಾರು ಯಾರಿಂದ ಆ ದುಡ್ಡು ಬಂತು ಎಂಬುದನ್ನು ಕಮಿಷನರ್ ಮೇಡಂ ತನಿಖೆ ನಡೆಸಿದಾಗ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.