ಹುಬ್ಬಳ್ಳಿ

ಹುಬ್ಬಳ್ಳಿಯಲ್ಲಿ “ಹೈವೇ” ಪೆಟ್ರೋಲಿಂಗ್ “ಡ್ರೈವರ್” ಆಗಲು “RPI” ಗೆ ಇಷ್ಟು ಕೊಡಬೇಕಂತೆ..!?

Spread the love

ಹುಬ್ಬಳ್ಳಿ: ನಗರದ ಹೈವೇ ಗಳಲ್ಲಿ ಪೆಟ್ರೋಲಿಂಗ್ ಮಾಡುವ ಸಲುವಾಗಿ ಪೊಲೀಸ್ ಇಲಾಖೆಗೆ ನಾಲ್ಕು ಹೊಸದಾಗಿ ಹೈವೇ ಪೆಟ್ರೋಲಿಂಗ್ ವಾಹನಗಳನ್ನು ಕಮೀಷನರ್ ಸಂತೋಷ್ ಬಾಬು ಅವರು ನಿಯೋಜನೆ ಮಾಡಿದ್ದಾರೆ,ಆದ್ರೆ ಇದನ್ನೆ ಬಂಡವಾಳ ಮಾಡಿಕೊಂಡ RPI ಒಬ್ಬರು ಚಾಲಕರಿಗೆ ಇಂತಿಷ್ಟು ಪೀಕ್ಸ್ ಮಾಡಿಕೊಂಡು ಹೈವೇ ಪೆಟ್ರೋಲಿಂಗ್ ವಾಹನಕ್ಕೆ ಚಾಲಕರನ್ನಾಗಿ ನೇಮಕ ಮಾಡಲಾಗುತ್ತಿದೆ ಎಂಬ ಮಾತು ಗೋಕುಲ್ ರಸ್ತೆ ಉದ್ದಕ್ಕೂ ಕೇಳಿ ಬರುತ್ತಿದೆ.

ಈಗ ಹೊಸದಾಗಿ ಬಂದಿರುವ ನಾಲ್ಕು ಹೈವೇ ಪೆಟ್ರೋಲಿಂಗ್ ವಾಹನಗಳಿಗೆ ಹೋಗ ಬೇಕಿರೋ ಚಾಲಕರಾಗಿ ಹೋಗಬೇಕಾದ ಸಿಬ್ಬಂದಿ RPI ನೀಡಿದ ಟಾಸ್ಕ್ ಪ್ರಕಾರ ಮೊದಲಿಗೆ 30K ಕೊಟ್ಟು ಪ್ರತಿ ತಿಂಗಳು 3 K ಕೊಡಬೇಕು ಅಂತಾ ಕರಾರು ಆದ ಮೇಲೆಯೇ ಹೈವೇ ಪೆಟ್ರೋಲಿಂಗ್ ವಾಹನಕ್ಕೆ ಆ ಸಿಬ್ಬಂದಿ ಚಾಲಕನಾಗಿ ನೇಮಕವಾಗುತ್ತಾರಂತೆ.

ಸದ್ಯ ಈ ವಿಷಯದ ಬಗ್ಗೆ ಕಮೀಷನರ್ ಸಂತೋಷ್ ಬಾಬು ಅವರು ಪರಿಶೀಲನೆ ನಡೆಸಿ ಒಂದು ವೇಳೆ ಈ ಆರೋಪ ನಿಜವಾದಲ್ಲಿ ಟಾಸ್ಕ್ ನೀಡಿದ ಅಧಿಕಾರಿ ಹಾಗೂ ಟಾಸ್ಕ್ ಪಡೆದ ಸಿಬ್ಬಂದಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page