ಹುಬ್ಬಳ್ಳಿ

“ನಗರ” ಸೇರಿದಂತೆ ಸುತ್ತಮುತ್ತ ಹೆಚ್ಚಿದ “ಇಸ್ಪೀಟ್” ಅಡ್ಡೆಗಳು…!

Spread the love

ಹುಬ್ಬಳ್ಳಿ:ನಗರ ಸೇರಿದಂತೆ ಹೊರವಲಯದಲ್ಲಿ ಮತ್ತೆ ಅಕ್ರಮ ಇಸ್ಪೀಟ್ ಅಡ್ಡೆಗಳು ಎಗ್ಗಿಲದೇ ಶುರುವಾಗಿದ್ದು ಇವುಗಳಿಗೆ ಕಡಿವಾಣ ಹಾಕಬೇಕಾದ ಖಾಕಿ ಮಾತ್ರ ಕಂಡು ಕಾಣದಂತೆ ಕರ್ತವ್ಯ ನಿರ್ವಹಿಸುತ್ತಿದೆಯೇ ಎಂಬ ಅನುಮಾನಗಳು ಇದೀಗ ಮೂಡಲಾರಂಭಿಸಿದೆ.

ಹುಬ್ಬಳ್ಳಿಯ ನಗರ ಸೇರಿದಂತೆ ಹೊರವಲಯದಲ್ಲಿ ಪ್ರತಿ ರಾತ್ರಿಯೂ ಕೂಡಾ ದೀಪದ ಆರಿದ ನಂತರ ದೀಪ ಬೆಳಗಿಸಿ ರಾತ್ರಿ ಸಮಯದಲ್ಲಿ ಇಸ್ಪೀಟ್ ಅಡ್ಡೆ ಚುರುಕಾಗಿ ನಡೆಯುತ್ತಿದೆ ಆದ್ರೆ ಇವುಗಳ ಬಗ್ಗೆ ಮಾಹಿತಿ ಗೊತ್ತಿದ್ರು ಕೂಡಾ ಗೊತ್ತಿಲ್ಲದೆ ಖಾಕಿ ಕರ್ತವ್ಯ ನಿರ್ವಹಿಸುತ್ತೀರೋದು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.

ಇನ್ನು ಪ್ರಮುಖವಾಗಿ ಈ ಇಸ್ಪೀಟ ಅಡ್ಡೆಗಳನ್ನು ರೌಡಿ ಶೀಟರ್ ಗಳು ನಡೆಸುತ್ತಿದ್ದು ಸ್ಥಳದಲ್ಲೇ ಫೈನಾನ್ಸ್ ಕೂಡಾ ಮಾಡಲಾಗುತ್ತದೆ ಅಂತೆ,ಹೀಗಾಗಿ ಇದರಲ್ಲಿ ಅವರಿವರ ಪಾಲು ಕೂಡಾ ಇದೆ ಮಾತುಗಳು ಇದೀಗ FM ರೇಡಿಯೋ ದಲ್ಲಿ ಬರೋ ಮುಂಗಾರು ಮಳೆಯ ರೀತಿಯಲ್ಲಿ ಆಗಾಗ ಬಂದು ಹೋಗುತ್ತಿದೆ.

ಹೀಗಾಗಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರಿಕೆ ವಹಿಸಿ ಕರ್ತವ್ಯ ನಿರ್ವಹಿಸಿದ ಕಮೀಷನರ್ ಮೇಡಂ ಇಂತಹ ಇಸ್ಪೀಟ್ ಅಡ್ಡೆಗಳ ಕಡೆಗಳಲ್ಲಿ ಗಮನ ಹರಿಸುತ್ತಾರೋ ಇಲ್ಲವೋ ಎಂಬುದನ್ನು ಮುಂಗಾರು ಮಳೆಯೇ ಹೇಳಬೇಕಿದೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page