ರಾಜಕೀಯಹುಬ್ಬಳ್ಳಿ

“ಬಿಜೆಪಿ” ಪಕ್ಷ ನನ್ನನ್ನು “ಯೂಸ್” ಮಾಡಿ ಕೈ ಕೊಟ್ಟಿತು..!

Spread the love

ಧಾರವಾಡ: ಪಕ್ಷ ನಮ್ಮನ್ನು ಊಟದ ಎಲೆ ಮಾಡಿದಂತೆ ಮಾಡಿದೆ. ಊಟ ಮಾಡಿ ಎಲೆ ಬೀಸಾಕೋ ಹಾಗೇ ನಮ್ಮನ್ನು ಇದೀಗ ಬೀಸಾಕಿದ್ದಾರೆ ಎಂದು ಕಲಘಟಗಿ ವಿಧಾನಸಭಾ ಮತಕ್ಷೇತ್ರದ ಹಾಲಿ ಬಿಜೆಪಿ ಶಾಸಕ ಸಿ.ಎಮ್.ನಿಂಬಣ್ಣವರ ಬೇಸರ ವ್ಯಕ್ತಪಡಿಸಿದ್ದಾರೆ.

ಕಲಘಟಗಿ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಟಿಕೆಟ್’ನ್ನು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡ ನಾಗರಾಜ್ ಛಬ್ಬಿ ಅವರಿಗೆ ನೀಡಿದ ಬೆನ್ನಲ್ಲೇ ಅಸಮಾಧಾನಗೊಂಡಿರುವ ಹಾಲಿ ಬಿಜೆಪಿ ಶಾಸಕ ಸಿ.ಎಮ್.ನಿಂಬಣ್ಣವರ, ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ನಾನೊಬ್ಬ ಮಾಜಿ ಶಾಸಕನಾಗಿ ನಾನು ಜೀವಂತ ಅದೇನೋ, ಇಲ್ಲವೋ ಎನ್ನುವುದನ್ನು ಕೇಳದೇ ಬಿಜೆಪಿಗೆ ಬೈದವರಿಗೆ ವರಿಷ್ಠರು ಟಿಕೆಟ್ ಕೊಟ್ಟಿದ್ದಾರೆ. ರಾಜ್ಯದ ನಾಯಕರು, ರಾಷ್ಟ್ರೀಯ ನಾಯಕರು ಯಾರೂ ಕೂಡಾ ಟಿಕೆಟ್ ವಿಚಾರವನ್ನು ನನಗೆ ಕೇಳಲೇ ಇಲ್ಲ, ಈ ಹಿಂದೆ ನಾಗರಾಜ್ ಛಬ್ಬಿಯನ್ನು ಪಕ್ಷಕ್ಕೆ ಸೇರಿಸಿಕೊಳ್ಳುವಾಗಲೂ ನನಗೆ ತಿಳಿಸಿಲ್ಲ, ಯಾರು ಒಬ್ಬರನ್ನು ಕೇಳದೇ ಛಬ್ಬಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಟಿಕೆಟ್ ನೀಡಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.

ಕಲಘಟಗಿ ಕ್ಷೇತ್ರದಲ್ಲಿ ಕಳೆದ 25 ವರ್ಷ ಪಕ್ಷವನ್ನು ಕಟ್ಟಿ ಬೆಳೆಸಿದ್ದು ನಾನು, ಹೀಗಿದ್ದಾಗ್ಯೂ ಸೌಜನ್ಯಕ್ಕಾದರೂ ನನಗೆ ಟಿಕೆಟ್ ಕೇಳಿಲ್ಲ, ಸದ್ಯ ಬಿಜೆಪಿಗೆ ಬೈದವರಿಗೆ ಟಿಕೆಟ್ ಕೊಟ್ಟಿದ್ದಾರೆ. ಅವರು ಪಕ್ಷಕ್ಕೆ ಬಂದಿದ್ದು ಸ್ವಾಗತ ಆದರೆ ನಾನು ಕಣದಲ್ಲಿ ಇರುತ್ತೇನೆಂದು ಪರೋಕ್ಷವಾಗಿ ಬಂಡಾಯದ ಸೂಚನೆಯನ್ನು ಸಿ.ಎಮ್.ನಿಂಬಣ್ಣವರ ನೀಡಿದ್ದಾರೆ.

ಪಕ್ಷದ ಕಾರ್ಯಕರ್ತರ ಸಭೆಯನ್ನು ಕರೆಯುತ್ತೇನೆ, ಸಭೆಯಲ್ಲಿ ಕಾರ್ಯಕರ್ತರು ಯಾವ ಸಲಹೆ ಸೂಚನೆಗಳನ್ನು ಕೊಡುತ್ತಾರೆ. ಅದರ ಆಧಾರದ ಮೇಲೆ ಮುಂದಿನ ನಿರ್ಧಾರ ಪ್ರಕಟ ಮಾಡುತ್ತೇನೆ ಎಂದರು.

ಇನ್ನು ಆಕಸ್ಮಿಕವಾಗಿ ನಾಗರಾಜ್ ಛಬ್ಬಿ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದ್ದರೇ? ಸಂತೋಷ ಲಾಡ್ ಅವರನ್ನು ನಮ್ಮ ನಾಯಕರು ಬಿಜೆಪಿಗೆ ಕರೆದುಕೊಳ್ಳತ್ತಿದ್ದರು ಅನಿಸುತೆ. ಕಲಘಟಗಿ ಕ್ಷೇತ್ರಕ್ಕೆ ಹೊರಗಿನವರೇ ಬೇಕಾ ಎಂದು ನಿಂಬಣ್ಣವರ ಪ್ರಶ್ನೆ ಮಾಡಿದರು.

ಇಂದು ಬಿಜೆಪಿ ದೊಡ್ಡ ಕಾರ್ಯಕರ್ತರನ್ನು ಹೊಂದಿದೆ. ಅವರ ಕಣ್ಣು ನೆತ್ತಿ ಮೇಲೆ ಬಂದಿದೆ. ಹಾಲಿ ಶಾಸಕ ಇದ್ದರು ಕೂಡಾ ನನಗೆ ಗೌರವ ಕೊಡಬೇಕಿತ್ತು. ಆದರೆ ಈ ರೀತಿ ಅಗೌರವ ಕೊಡೋದು ಸರಿ ಅಲ್ಲ. ಎಲ್ಲದಕ್ಕೂ ಒಂದು ಅಂತ್ಯ ಬರಲೇಬೇಕು. ಅಧಿಕಾರದ ಮದ ಬರಬಾರದು ಎಂದು ಶಾಸಕ ಸಿ.ಎಮ್.ನಿಂಬಣ್ಣವರ ಆಕ್ರೋಶ ವ್ಯಕ್ತಪಡಿಸಿದರು.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page