ಹುಬ್ಬಳ್ಳಿ
ಹು-ಧಾ ಕಮಿಷನರೇಟ್’ನ L&O “ಡಿಸಿಪಿ”ಯಾಗಿ “ರಾಜೀವ್ ಎಂ” ಅಧಿಕಾರ ಸ್ವೀಕಾರ.
ಹುಬ್ಬಳ್ಳಿ: ಹು-ಧಾ ಕಮಿಷನರೇಟ್ ನ ಕಾನೂನು ಸುವ್ಯವಸ್ಥೆ ಡಿಸಿಪಿ ಯಾಗಿ ರಾಜೀವ್ ಎಂ ಅಧಿಕಾರವನ್ನು ವಹಿಸಿಕೊಂಡರು.
ಕಳೆದ ಒಂದು ವರ್ಷದಿಂದ ಡಿಸಿಪಿ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಾಹಿಲ್ ಬಾಗ್ಲಾ ಅವರನ್ನು ರಾಜ್ಯ ಸರ್ಕಾರ ಗುಪ್ತ ವಾರ್ತೆಗೆ ವರ್ಗಾವಣೆ ಮಾಡಿದ ಹಿನ್ನೆಲೆಯಲ್ಲಿ,ಅವರ ಸ್ಥಾನಕ್ಕೆ ರಾಜೀವ್ ಎಂ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿತ್ತು.
ಈ ಹಿನ್ನೆಲೆಯಲ್ಲಿ ಇಂದು ನವನಗರದಲ್ಲಿರುವ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ನಿರ್ಗಮಿತ ಡಿಸಿಪಿ ಶಾಹಿಲ್ ಬಾಗ್ಲಾ ಅವರು ರಾಜೀವ್ ಎಂ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.