ಹುಬ್ಬಳ್ಳಿ

ಹುಬ್ಬಳ್ಳಿಯಲ್ಲಿ “ಫುಲ್ಲ್ ಓಪನ್ ಮಟ್ಕಾ”ದಂದೇ..!?

Spread the love

ಹುಬ್ಬಳ್ಳಿ:ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಇಷ್ಟು ದಿನಗಳ ಕಾಲ ಸುಮ್ಮನಿದ್ದ ಮಟ್ಕಾ ಕುಳಗಳು ಇದೀಗ ಮತ್ತೆ ಬಾಲ ಬಿಚ್ಚಿದ್ದು ಇದಕ್ಕೆ ಕೆಲವೊಂದಿಷ್ಟು ಪೊಲೀಸ್ ಅಧಿಕಾರಿಗಳೇ ಪರೋಕ್ಷವಾಗಿ ಸಾಥ್ ಕೊಟ್ಟು ದಂದೆಯನ್ನು ಮತ್ತೆ ಶುರು ಮಾಡಿಸಿದ್ದಾರೆ.

ನಗರದ ಸ್ಟೇಷನ್ ಒಂದರ ವ್ಯಾಪ್ತಿ ಸೇರಿದಂತೆ ವಿವಿಧ ಕಡೆಗಳಲ್ಲಿ ರಾಜಾರೋಷವಾಗಿ ದಂದೇ ನಡೆಯುತ್ತಿದ್ದು ಇದಕ್ಕೆ ಅಲ್ಲಿನ ಮೂರು ಸ್ಟಾರಿನ ಅಧಿಕಾರಿ ಹಾಗೂ ಅಲ್ಲಿನ ಕ್ರೈಂ ಸಿಬ್ಬಂದಿಗಳೆಲ್ಲರು ಮಂತ್ಲಿ ಫಿಕ್ಸ್ ಮಾಡಿಕೊಂಡು ಬಿಂದಾಸ್ ಆಗಿ ದಂದೇ ನಡೆಸಲು ಪರವಾನಿಗೆ ನೀಡಿದ್ದಾರೆ.

ಅಷ್ಟೇ ಅಲ್ಲದೆ ಮೂರು ಸ್ಟಾರಿನ ಮೇಲಿನ ಅಧಿಕಾರಿಗೂ ಕೂಡಾ ಪ್ರತಿ ತಿಂಗಳು GSTಯನ್ನು ಕ್ರೈಂ ಸಿಬ್ಬಂದಿ ತಪ್ಪದೆ ತಲುಪಿಸುತ್ತಿದ್ದು,ದಂದೇ ಕೋರರರಿಗೆ ಯಾವುದೇ ರೀತಿಯಾದ ತೊಂದರೆ ಆಗದಂತೆ ಮೂರು ಸ್ಟಾರಿನ ಮೇಲಾಧಿಕಾರಿ ನೋಡಿಕೊಂಡು ಹೋಗುತ್ತಿದ್ದಾರೆ.ಪ್ರತಿ ತಲೆಗೂ ಇಂತಿಷ್ಟು ಮಂತ್ಲಿ ಪಿಕ್ಸ್ ಮಾಡಿರೋ ಮಟ್ಕಾ ಕುಳಗಳು ಯಾವುದೇ ಅಂಜಿಕೆ ಇಲ್ಲದೆ ತಮ್ಮ ದಂದೆಯನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ.

ಯಾವ ಯಾವ ಅಧಿಕಾರಿಗೆ ಎಸ್ಟೇಷ್ಟು ಮಂತ್ಲಿ ಇದೆ ಎಂಬುದನ್ನು ಖುದ್ದು ಮಟ್ಕಾ ಕುಳಗಳೇ ಹೇಳಿದ್ದು ಆ ಮಹಾನುಭಾವರ ಭಾವಚಿತ್ರದ ಸಮೇತ ಸಮಗ್ರ ವರದಿಯನ್ನು ನಮ್ಮ ವಿಶೇಷ ತನಿಖಾ ತಂಡ ಎಳೆ ಎಳೆಯಾಗಿ ಬಿಚ್ಚಡಲಿದೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page