ಹಾವೇರಿ : ದೂರು ಕೊಡಲು ಹೋಗಿದ್ದ ಮಹಿಳೆಯ ಜೊತೆ ಅಸಭ್ಯವಾಗಿ ವರ್ತನೆ ತೋರಿದ ಇನ್ಸ್ಪೆಕ್ಟರ್ ರನ್ನು ಅಮಾನತ್ತು ಮಾಡಿದ ಘಟನೆ ಹಾವೇರಿಯಲ್ಲಿ ನಡೆದಿದೆ.
ಹಾವೇರಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚಿದಾನಂದ ಎಂಬುವರೇ,ದೂರು ಕೊಡಲು ಬಂದ ಮಹಿಳೆಯ ಜೊತೆ ಅಸಭ್ಯವಾಗಿ ವರ್ತನೆ ಮಾಡಿದ್ದಲ್ಲದೇ ವಿಡಿಯೋ ಕಾಲ್ ಮಾಡಿ ಅಸಭ್ಯವಾಗಿ ವರ್ತನೆ..? ಮಾಡಿದ ಹಿನ್ನೆಲೆಯಲ್ಲಿ.
ದಾವಣಗೆರೆ ರೇಂಜ್ ಐಜಿ ರವಿ ಆದೇಶದ ಮೇರೆಗೆ ಚಿದಾನಂದ ನನ್ನು ಅಮಾನತ್ತು ಮಾಡಲಾಗಿದೆ,ಸಮಸ್ಯೆ ಎಂದು ಹೇಳಿಕೊಳ್ಳಲು ಬಂದ ಹೆಣ್ಣುಮಕ್ಕಳಿಗೆ ಸಮಸ್ಯೆ ಉಂಟು ಮಾಡಲು ಯತ್ನಿಸಿದ ಈ ಇನ್ಸ್ಪೆಕ್ಟರ್ ಗೇ ಇದೀಗ ಹಿರಿಯ ಅಧಿಕಾರಿಗಳು ಸರಿಯಾದ ಪಾಠವನ್ನೇ ಕಲಿಸಿದ್ದಾರೆ.