ಎಕ್ಸ್ಲುಸೀವ್ಬ್ರೇಕಿಂಗ್ ನ್ಯೂಸ್ಹುಬ್ಬಳ್ಳಿ- ಧಾರವಾಡ

“CM” ಏನು “ಕಿತ್ಕೊಂಡಿಲ್ಲ” ಇನ್ನ,ನಿವೇನ “ಮಾಡ್ತೀರಿ”ಅಂತಾ 104ರವ ಆವಾಜ್..!

Spread the love

ಹುಬ್ಬಳ್ಳಿ : ಕಳೆದ ಹಲವು ದಿನಗಳಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ 104 ಆರೋಗ್ಯ ಸಹಾಯವಾಣಿ ಸಿಬ್ಬಂದಿ ಪ್ರತಿಭಟಿನೆ ಮಾಡುತ್ತಿರೋ ವೇಳೆಯಲ್ಲಿ 104 ಆರೋಗ್ಯ ಸಹಾಯವಾಣಿಯ ಅಧಿಕಾರಿ ನಾಲಿಗೆ ಹರಿ ಬಿಟ್ಟಿರೋ ವಿಡಿಯೋ ಇದೀಗ ವೈರಲ್ ಆಗಿದೆ.

ಪ್ರತಿಭಟನೆ ವೇಳೆಯಲ್ಲಿ ಅಧಿಕಾರಿ ಅಹ್ಮದ್ ಯಾಕೂಬ್ ಎಂಬಾತ ಮುಖ್ಯಮಂತ್ರಿಯೇ ಏನು ಕಿತ್ತುಕೊಂಡಿಲ್ಲ,ಇನ್ನು ನೀವೇನ ಮಾಡೋದಕ್ಕೆ ಆಗತ್ತೆ ಅಂತಾ ಅಂದಿರೋ ವಿಡಿಯೋ ವೈರಲ್ ಆಗಿದೆ.

ಕಳೆದ 15 ದಿನಗಳಿಂದ ಆರೋಗ್ಯ ಸಹಾಯವಾಣಿ ಸಿಬ್ಬಂದಿಗಳು ಹಲವು ಬೇಡಿಕೆಗಳನ್ನು ಮುಂದೆ ಇಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ,ಆದ್ರೆ ಇದು ವರೆಗೂ ಯಾರೊಬ್ಬರೂ ಕೂಡಾ ಇತ್ತ ಗಮನವನ್ನು ಹರಿಸಿಲ್ಲ ಎಂದು ಆರೋಗ್ಯ ಸಹಾಯವಾಣಿಯ ಸಿಬ್ಬಂದಿ ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.

ಸಧ್ಯ ಹುಬ್ಬಳ್ಳಿಯ IT ಪಾರ್ಕ್ ನಲ್ಲಿರುವ ಆರೋಗ್ಯ ಸಹಾಯವಾಣಿ ಕೇಂದ್ರದಲ್ಲಿರುವ 200 ಸಿಬ್ಬಂದಿಗಳು ಕೆಲಸ ಬಿಟ್ಟು ಕಚೇರಿಯ ಹೊರಗಡೆ ಪ್ರತಿಭಟನೆ ಮಾಡುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page