ಎಕ್ಸ್ಲುಸೀವ್ಹುಬ್ಬಳ್ಳಿ

“CP” ಕಚೇರಿ ತಲುಪಿದ ನಗರದ “ಇನ್ಸ್ಪೆಕ್ಟರ್”ನ “ಲವ್ವ್, ಸೆಕ್ಸ್, ದೋಖಾ”ನಾನವನಲ್ಲ ಸರ್.

Spread the love

ಹುಬ್ಬಳ್ಳಿ:ನಗರದ ಪ್ರಮುಖ ಪೊಲೀಸ್ ಠಾಣೆಯಲ್ಲಿನ ಪೊಲೀಸ್ ಅಧಿಕಾರಿಯ ಪ್ರೇಮ ಪ್ರಕರಣ ಇದೀಗ ಕಮೀಷನರ್ ಕಚೇರಿಯ ಅಂಗಳವನ್ನು ತಲುಪಿದ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.ಸದಾ ಗೀಜಗುಡುಗುವ ಆ ಠಾಣೆಯ ಅಧಿಕಾರಿ ತನ್ನ ಹೆಗಲ ಮೇಲೆ ಎರಡು ನಕ್ಷತ್ರ ಇದ್ದಾಗ ಓರ್ವ ಮಹಿಳೆಗೆ ಆಗಸವನ್ನು ತೋರಿಸಿದ್ದ ಅದು ಕೂಡಾ ವಿವಾಹಿತ ಮಹಿಳೆಯ ಜೊತೆ.

ಅದೇ ರೀತಿ ಈ ಇಬ್ಬರ ನಡುವಿನ ಸಂಬಂಧ ಮಹಿಳೆಯ ಗಂಡನಿಗೆ ತಿಳಿದ ಕೂಡಲೇ ಎರಡು ಸ್ಟಾರಿನ್ ಅಧಿಕಾರಿಯ ಸಹವಾಸವೇ ಬೇಡ ಅಂತಾ ಮಹಿಳೆಯನ್ನು ಬಿಟ್ಟು ತನ್ನ ಬದುಕನ್ನು ಕಟ್ಟಿಕೊಂಡಿದ್ದ, ಆದ್ರೆ ಎರಡೂ ಸ್ಟಾರಿನ್ ಅಧಿಕಾರಿಯ ಭುಜದ ಮೇಲೆ ಇನ್ನೊಂದು ಸ್ಟಾರ್ ಬರುತ್ತಿದ್ದ ಹಾಗೆ ಆಕಾಶ ತೋರಿಸುತ್ತಿದ್ದ ಮಹಿಳೆಗೆ ಕಾರ್ಮೋಡ ತೋರಿಸಿ ಮರೆಯಾಗಲು ಯತ್ನಿಸಿದ್ದ.

ಇದರಿಂದ ಮನನೊಂದ ಮಹಿಳೆ ಇಷ್ಟು ದಿನಗಳ ಕಾಲ ಆಗಸ ತೋರಿಸಿ ಇದೀಗ ಕಾರ್ಮೋಡ ತೋರಿಸುತ್ತಿರೋದು ಯಾಕೆ,ನಿನ್ನಿಂದಾಗಿ ನನ್ನ ಹಣೆಯ ಮೇಲಿನ ರವಿ ಕೂಡಾ ದೂರ ಆದ ಮುಂದೆ ನನ್ನ ಜೀವನದ ಕಥೆ ಹೇಗೆ ಅಂತಾ ನ್ಯಾಯಕ್ಕಾಗಿ ಸಿಪಿ ಕಚೇರಿಗೆ ತೆರಳಿ ತನ್ನ ಕಥೆಯನ್ನು ಗುಪ್ತವಾಗಿ ಹೇಳಲು ಪ್ರಯತ್ನ ಪಟ್ಟರು ಕೂಡಾ ಪ್ರಯೋಜನವಾಗಿಲ್ಲ.ಅಷ್ಟೇ ಅಲ್ಲದೇ ಮಹಿಳೆ ರಾದ್ದಂತ ಮಾಡುತ್ತಿದ್ದ ಹಾಗೆ ಸಿಪಿ ಕಚೇರಿಯ ಪಕ್ಕದಲ್ಲೇ ಇದ್ದ ಠಾಣೆಯಿಂದ ಇಬ್ಬರು ಮಹಿಳಾ ಕಾನ್ಸ್ಟೇಬಲ್ ರನ್ನು ಕರೆಯಿಸಿ ಸಿಪಿ ಕಚೇರಿಯಿಂದ ಹೊರಗೆ ಹಾಕಿದ್ದಾರೆ ಅಂತಾ ಹೇಳಲಾಗುತ್ತಿದೆ..!?

ಈ ಬಗ್ಗೆ ಹಿರಿಯ ಅಧಿಕಾರಿ ಮೂರು ಸ್ಟಾರಿನ್ ಅಧಿಕಾರಿಯ ಕೇಳಿದ್ರೆ ಇಲ್ಲ ಸರ್ ಇವಳು ಬ್ಲ್ಯಾಕ್ ಮೇಲ್ ಮಾಡ್ತಿದ್ದಾಳೆ ಇವಳ ಮನಸ್ಥಿತಿ ಸರಿ ಇಲ್ಲ ಎಂದು ಸಬೂಬು ಹೇಳಿ,ಸಾಬೂನಿಂದ ಕೈ ತೊಳೆದುಕೊಂಡು ಬಂದಿದ್ದಾರೆ ಅಂತೇ, ನಾಲ್ಕು ಜನರಿಗೆ ಬುದ್ಧಿವಾದ ಹೇಳುವ ಅಧಿಕಾರಿ ಮಾಡಿದ ತಪ್ಪನ್ನು ಒಪ್ಪಿಕೊಳ್ಳೋದನ್ನು ಬಿಟ್ಟು,ಸತ್ಯವನ್ನು ಮರೆಮಾಚುವುದು ಎಷ್ಟು ಸರಿ ಆಗಸ ತೋರಿಸುವಾಗ ಇದ್ದ ಆ ಹುಮ್ಮಸ್ಸು ಇದೀಗ ಯಾಕೆ ಇಲ್ಲ ಎಂಬುದು ಇದೀಗ ಪ್ರಶ್ನೆ…ಪ್ರಶ್ನೆಯಾಗಿಯೇ ಉಳಿದಿದ್ದು ಇಂಥವರಿಗೆ ಸಿದ್ದಾರೊಡ ಸ್ವಾಮೀ ಬುದ್ದಿ ಕೊಡಬೇಕಿದೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page