ಬ್ರೇಕಿಂಗ್ ನ್ಯೂಸ್ಹುಬ್ಬಳ್ಳಿ

“ಹುಬ್ಬಳ್ಳಿಯಲ್ಲಿ” ಹಾಡು ಹಗಲೇ “26” ಲಕ್ಷ ಹಣ ದರೋಡೆ “3” ಜನ ಜೈಲಿಗೆ..!

Spread the love

ಹುಬ್ಬಳ್ಳಿ: ನಗರದಲ್ಲಿ ಹಾಡಹಗಲೇ ನಡೆದಿದ್ದ 26 ಲಕ್ಷ ಹಣ ದರೋಡೆ ಪ್ರಕರಣಕ್ಕೆ ಸಂಬಂದಿಸಿದಂತೆ ಹುಬ್ಬಳ್ಳಿಯ ಗೋಕುಲ್ ಠಾಣೆಯ ಪೊಲೀಸರು ಮೂರು ಜನ ಆರೋಪಿಗಳನ್ನು ಹೆಡೆಮುರಿಗಟ್ಟಿ ಕಂಬಿ ಹಿಂದೆ ತಳ್ಳುವಲ್ಲಿ ಗೋಕುಲ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ ಯಶಸ್ವಿಯಾಗಿದ್ದಾರೆ.

ಕಳೆದ 6 ದಿನಗಳ ಹಿಂದೆ ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿರುವ ಸೆಕ್ಯೂರ್ ಆಸ್ಪತ್ರೆಯ ಮುಂಬಾಗದಲ್ಲಿ ಪುನಾ ಮೂಲದ ಉದ್ಯಮಿ ದೀರಜ ಎಂಬುವರು 300 ಜನ ಕಾರ್ಮಿಕರನ್ನು ಒದಗಿಸಿ ಕೊಡುತ್ತೇವೆ ಎಂದು ಹುಬ್ಬಳ್ಳಿಗೆ ಕರೆಸಿ ಅವರ ಕಾರಿನಲ್ಲಿದ್ದ 26 ಲಕ್ಷ ಹಣವಿದ್ದ ಬ್ಯಾಗ್ ಅನ್ನು ದರೋಡೆ ಮಾಡಿ ಬೈಕ್ ನಲ್ಲಿ ಪರಾರಿಯಾಗಿದ್ದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಗೋಕುಲ್ ಠಾಣೆಯ ಇನ್ಸ್ಪೆಕ್ಟರ್ ನೀಲಮ್ಮನವರ ಆಂಡ್ ಟೀಂ ಖಚಿತ ಮಾಹಿತಿಯನ್ನು ಕಲೆ ಹಾಕಿ ಹುಬ್ಬಳ್ಳಿಯ ಇಬ್ಬರು ಹಾಗೂ ಮುಂಡಗೋಡ ಮೂಲದ ಓರ್ವ ಸೇರಿದಂತೆ ಮೂವರು ಆರೋಪಿಗಳನ್ನು ಬಂದನ ಮಾಡಿದ್ದಾರೆ.ಸದ್ಯ ಬಂಧಿತ ಆರೋಪಿಗಳಿಂದ ದರೋಡೆ ಮಾಡಲು ಬಳಸಿದ್ದ ಹೋಂಡಾ ಡಿಯೋ ಬೈಕ್ ಹಾಗೂ ದರೋಡೆ ಮಾಡಿದ ನಗದು ಹಣವನ್ನು ಗೋಕುಲ್ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸದ್ಯ ದರೋಡೆ ಪ್ರಕರಣವನ್ನು ಬೇಧಿಸಿದ ಗೋಕುಲ್ ಠಾಣೆಯ ಇನ್ಸ್ಪೆಕ್ಟರ್ ನೀಲಮನ್ನವರ ಆಂಡ್ ಟೀಂ ಗೆ ಕಮೀಷನರ್ ರೇಣುಕಾ ಸುಕುಮಾರ,ಡಿಸಿಪಿಗಳಾದ ರಾಜೀವ್ ಹಾಗೂ ಗೋಪಾಲ್ ಬ್ಯಾಕೋಡ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page