ಅಪರಾಧಬೆಂಗಳೂರುಬ್ರೇಕಿಂಗ್ ನ್ಯೂಸ್

ಬರೋಬ್ಬರಿ 53 ಬೈಕ್ ಕಳ್ಳತನ ಮಾಡಿಸಿದ ಪೊಲೀಸ್ ಕಾನ್ಸ್ಟೇಬಲ್..!ಹೊನ್ನಪ್ಪ

Spread the love

ಬೆಂಗಳೂರು: ಕಾನೂನು ಕಾಯೋ ಪೊಲೀಸಪ್ಪನೇ ಕಳ್ಳತನದ ರೂವಾರಿಯಾಗಿ ಕಳ್ಳತನ ಮಾಡಿಸಿದ ಘಟನೆ ಬೆಳಕಿಗೆ ಬಂದಿದ್ದು,ಬೇಲಿಯೇ ಎದ್ದು ಹೊಲವನ್ನು ಮೆಯ್ದಂತಾಗಿದೆ.

ಹೊನ್ನಪ್ಪ ( ರವಿ) ಎಂಬ ಕಾನ್ಸ್ಟೇಬಲ್ ಅಪ್ರಾಪ್ತ ಬಾಲಕರನ್ನು ಬಳಸಿಕೊಂಡು ಬೈಕ್ ಕಳ್ಳತನ‌ ಮಾಡಿಸಿ ನಂತರ ಯಾರಿಗೂ ಗೊತ್ತಾಗದಂತೆ ಮಾರುತ್ತಿದ್ದ.ಬೆಂಗಳೂರು ,ಬೆಂಗಳೂರು ಹೊರವಲಯ ಹಾವೇರಿಯ ರಾಣಿಬೆನ್ನೂರು ಸೇರಿದಂತೆ ಅನೇಕ ಕಡೆ ಬೈಕ್ ಗಳ ಕಳ್ಳತನ ಮಾಡಿಸಿದ್ದ ಈ ಕಳ್ಳ‌ ಪೊಲೀಸ್ ಈಗ ಮಾಗಡಿ ಪೊಲೀಸ್ ಅತಿಥಿಯಾಗಿದ್ದಾನೆ.

ಬಂಧಿತ ಆರೋಪಿ ಈವರೆಗೆ ಮಾರಾಟ ಮಾಡಿದ್ದ 53 ಬೈಕ್ ಗಳನ್ನ ಪೊಲೀಸ್ರು ವಶಕ್ಕೆ ಪಡೆದಿದ್ದಾರೆ 2016 ರ ಬ್ಯಾಚ್ ನ ಸಿವಿಲ್ ಕಾನ್ ಸ್ಟೇಬಲ್ ಆಗಿದ್ದ ಈತ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಸ್ತುತ ಕೆಲಸ ನಿರ್ವಹಿಸುತ್ತಿದ್ದ ಹಾಗೂ ಸದ್ಯ ಒಒಡಿ ಮೇಲೆ ಐಪಿಎಸ್ ಅಧಿಕಾರಿಯೊಬ್ಬರ ಪರ್ಸನಲ್ ಕಾರು ಡ್ರೈವರ್ ಆಗಿ ಕರ್ತವ್ಯ ಮಾಡುತ್ತಿದ್ದಾನೆ.

ಹೊನ್ನಪ್ಪ ,ರಾಜಸ್ಥಾನದ ರಮೇಶ್, ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.ಅಪ್ರಾಪ್ತರು ಬೈಕ್ ಕಳ್ಳತನ ಮಾಡಿ ಹೊನ್ನಪ್ಪನಿಗೆ ತಂದು ಕೊಡ್ತಿದ್ರು,ಅದನ್ನು ಮಾರಾಟ ಮಾಡಿ ಐದರಿಂದ ಆರು ಸಾವಿರ ಹಣವನ್ನ ಹುಡುಗರಿಗೆ ತಂದು ಕೊಡುತ್ತಿದ್ದ ಈತ.

ಸದ್ಯ ಕಾನ್ಸ್ಟೇಬಲ್ ನನ್ನ ಬಾಡಿವಾರೆಂಟ್ ಮೇಲೆ ವಶಕ್ಕೆ ಪಡೆದು ಮಾಗಡಿ ರೋಡ್ ಪೊಲೀಸ್ರು ವಿಚಾರಣೆ ನಡೆಸುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page