ಅಪರಾಧತುಮಕೂರುನಮ್ಮೂರು

ಅಯ್ಯೋ ದೇವರೆ ಮಗುವಿಗೆ “ಔಷಧಿ” ಕೊಡುವ ಬದಲು “ಪಾಯಿಸನ್” ಕೊಟ್ಟ ಮೆಡಿಕಲ್ ಶಾಪ್..!ಮಾಲೀಕ

Spread the love


ತುಮಕೂರು: ಮೆಡಿಕಲ್ ಶಾಪ್‍ವೊಂದರಲ್ಲಿ ಗ್ರಾಹಕರೊಬ್ಬರಿಗೆ ಮಗುವಿಗೆ ಗ್ರೈಪ್ ವಾಟರ್ ಬದಲು ಪಾಯಿಸನ್ ಕೊಟ್ಟು ಕಳುಹಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ.

ಮಧುಗಿರಿ ತಾಲೂಕಿನ ಐಡಿಹಳ್ಳಿಯ ಪದ್ಮ ಮೆಡಿಕಲ್ ಒಂದರಲ್ಲಿ ಈ ಯಡವಟ್ಟು ನಡೆದಿದ್ದು, ಕಂತಗಾನಹಳ್ಳಿಯ ಕಲ್ಯಾಣಿ ಎನ್ನುವವವರು ಮೆಡಿಕಲ್‍ಗೆ ಬಂದು ಗ್ರೈಪ್ ವಾಟರ್ ಕೇಳಿದ್ದಾರೆ. ಈ ವೇಳೆ ಮೆಡಿಕಲ್ ಮಾಲೀಕನ ಪತ್ನಿ ಗ್ರೇಪ್ ವಾಟರ್ ಬದಲು ಸರ್ಜಿಕಲ್ ಸ್ಪಿರಿಟ್ ನೀಡಿ ಯಡವಟ್ಟು ಮಾಡಿದ್ದಾರೆ.

ಗ್ರೈಪ್ ವಾಟರ್ ಕೇಳಿ ಪಡೆದುಕೊಂಡು ಹೋಗಿದ್ದ ಕಲ್ಯಾಣಿಯವರು ಮನೆಗೆ ಹೋಗಿ ಬಾಟಲ್ ಓಪನ್ ಮಾಡಿ ನೋಡಿದಾಗ ಕೆಟ್ಟ ವಾಸನೆ ಬರುತಿತ್ತು. ಇದನ್ನು ಕಂಡು ಗಾಬರಿಯಾಗಿ ಪತಿ ಶಿವಕುಮಾರ ಗೆ ತೋರಿಸಿದ್ದಾರೆ. ಆಗ ಪಾಯಿಸನ್ ಅನ್ನೋದು ಧೃಢಪಟ್ಟಿದೆ, ಇದೀಗ ಮೆಡಿಕಲ್ ವಿರುದ್ಧ ಮಿಡಿಗೇಶಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಧ್ಯ ಮಗುವಿಗೆ ಔಷಧಿ ಕೊಟ್ಟ ಮೆಡಿಕಲ್ ಶಾಪ್ ಮಾಲೀಕ ಹಾಗೂ ಪೋಷಕರು,ಪೊಲೀಸರು ಮಾತನಾಡಿದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page