ಅಪರಾಧಚಾಮರಾಜ ನಗರ

ಹಾಡುಹಗಲೇ “ಶಿಕ್ಷಕನ ಮುಖಕ್ಕೇ” ಪೆಪ್ಪರ್ “ಸ್ಪ್ರೇ” ಮಾಡಿ 2 ಲಕ್ಷ ದರೋಡೆ.

Spread the love

ಚಾಮರಾಜನಗರ: ಶಿಕ್ಷಕರೊಬ್ಬರಿಗೆ ಪೆಪ್ಪರ್ ಸ್ಪ್ರೇ ಹೊಡೆದು ಹಾಡಹಗಲೇ 2 ಲಕ್ಷ ರೂ. ದರೋಡೆ ಮಾಡಿರುವ ಘಟನೆ ನಗರದ ಭುವನೇಶ್ವರಿ ವೃತ್ತದ ಸಮೀಪ ನಡೆದಿದೆ.

ಚಾಮರಾಜನಗರ ತಾಲೂಕಿನ ಕಾಳನಹುಂಡಿಯಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವ ನಗರದ ಹೌಸಿಂಗ್ ಬೋರ್ಡ್ ನಿವಾಸಿ ಶಿವಕುಮಾರ್​ ಮನೆ ಕಟ್ಟಿಸುವ ಸಲುವಾಗಿ ಇಟ್ಟಿದ್ದ ಒಂದು ಲಕ್ಷ ರೂ. ಹಣ ಮತ್ತು ಕೆನರಾ ಬ್ಯಾಂಕಿನಲ್ಲಿ ಒಂದು ಲಕ್ಷ ರೂ. ಹೌಸಿಂಗ್ ಲೋನ್ ಹಣ ಡ್ರಾ ಮಾಡಿಕೊಂಡು ಬರುತ್ತಿದ್ದರು.

ತಾವು ತಂದಿದ್ದ ಬ್ಯಾಗ್​ನಲ್ಲಿ 2 ಲಕ್ಷ ರೂ. ಹಾಕಿಕೊಂಡು ಬಸ್​ಗಾಗಿ ಕಾಯುತ್ತಿದ್ದರು.ಇದನ್ನು ಗಮನಿಸಿದ ಕಳ್ಳನೊಬ್ಬ ಬಸ್​ಗಾಗಿ ಕಾಯುತ್ತಿದ್ದ ಶಿಕ್ಷಕನ ಕಣ್ಣಿಗೆ ಪೆಪ್ಪರ್ ಸ್ಪ್ರೇ ಹೊಡೆದಿದ್ದಾನೆ. ಕೂಡಲೇ ಶಿವಕುಮಾರ್​ ಕಣ್ಣಿಗೆ ಉರಿ ಕಾಣಿಸಿಕೊಂಡಿದ್ದರಿಂದ ಬ್ಯಾಗ್​ನ್ನು ಪಕ್ಕಕ್ಕಿಟ್ಟು ವಾಟರ್ ಬಾಟಲ್ ಮುಖವನ್ನು ತೊಳೆದುಕೊಳ್ಳುತ್ತಿದ್ದರು.

ಈ ವೇಳೆ, ಕಳ್ಳ ಹಣವಿದ್ದ ಬ್ಯಾಗ್​ವನ್ನು ಲಪಟಾಯಿಸಿ ಪರಾರಿಯಾಗಿದ್ದಾನೆ.ಈ ಸಂಬಂಧ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದ್ದು, ಭುವನೇಶ್ವರಿ ವೃತ್ತದ ಆಸುಪಾಸಿನ ಮಳಿಗೆಗಳಲ್ಲಿರುವ ಸಿಸಿಟಿವಿಗಳನ್ನು ಪೊಲೀಸರು ಈಗ ಜಾಲಾಡುತ್ತಿದ್ದಾರೆ‌.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page