ಅಪರಾಧಚಾಮರಾಜ ನಗರ

ಮಗಳನ್ನು “ಕೊಲೆ” ಮಾಡಿದವರನ್ನು “ಬಂಧಿಸದ” ಪೊಲೀಸರು?”ಪೊಲೀಸ್ ಠಾಣೆಯ” ಮುಂದೆಯೇ ಪೋಷಕರು..!

Spread the love


ಚಾಮರಾಜನಗರ: ವರದಕ್ಷಿಣೆಗಾಗಿ ಪತ್ನಿಗೆ ಹಿಂಸೆ ನೀಡಿ ಕೊಲೆ ಮಾಡಿ ನೇಣು ಹಾಕಿದ ಘಟನೆಗೆ ಸಂಬಂದಿಸಿದಂತೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಚಾಮರಾಜನಗರ ತಾಲೂಕಿನ ಉಡಿಗಾಲ ಗ್ರಾಮಸ್ಥರು ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿದರು.

ಚಾಮರಾಜನಗರ
ತಾಲೂಕಿನ ಕೊತ್ತಲವಾಡಿ ಗ್ರಾಮದ ದೇವಪ್ಪ ಎಂಬುವರ ಪುತ್ರಿ 22 ವರ್ಷದ ದಿವ್ಯಾ ಮೃತ ದುರ್ದೈವಿಯಾಗಿದ್ದಾಳೆ. ಈ ಘಟನೆ ಬಳಿಕ ದಿವ್ಯಾ ಪತಿ ಜಯಶಂಕರ್, ಮಾವ ಸಿದ್ದಮಲ್ಲಪ್ಪ, ಅತ್ತೆ ಸುಂದ್ರಮ್ಮ, ಬಾವ ಚಂದ್ರಶೇಖರ್, ವಾರಗಿತ್ತಿ ರೇಖಾ ಪರಾರಿಯಾಗಿದ್ದು, ಆರೋಪಿಗಳನ್ನು ಬಂದಿಸಿ ಕಾನೂನಡಿ ಶಿಕ್ಷೆಗೆ ಗುರಿಪಡಿಸಲು ಗ್ರಾಮಾಂತರ ಪೊಲೀಸ್ ಠಾಣೆಯವರು ವಿಫಲರಾಗಿದ್ದಾರೆ ಎಂದು ಆರೋಪಿಸಲಾಯಿತು.

ಚಾಮರಾಜನಗರದ ಡಿವೈಎಸ್‌ಪಿ ಕಛೇರಿಯ ಮುಂದೆ ಶನಿವಾರ ಮೃತ ದಿವ್ಯಳ ಭಾವಚಿತ್ರ ಹಿಡಿದು ಹೆತ್ತವರು ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.

ಕಳೆದ 9 ತಿಂಗಳ ಹಿಂದೆಯಷ್ಟೇ ಉಡಿಗಾಲ ಗ್ರಾಮದ ಜಯಶಂಕರ್ ಜೊತೆ ದಿವ್ಯಾ ವಿವಾಹವಾಗಿತ್ತು. ಮದುವೆಯ ಸಂದರ್ಭದಲ್ಲಿ ವರದಕ್ಷಿಣೆಯಾಗಿ 2 ಲಕ್ಷ ರೂ. ನಗದು, ಚಿನ್ನಾಭರಣ, ಬೆಳ್ಳಿಯನ್ನು ನೀಡಿ ಅದ್ದೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಆದರೆ, ಹೆಚ್ಚಿನ ಹಣಕ್ಕಾಗಿ ಗಂಡ ಪೀಡಿಸುತ್ತಿದ್ದ ಎನ್ನಲಾಗಿದೆ.ಪತಿ ಮನೆಯವರು ಕೊಲೆ ಮಾಡಿ ಬಳಿಕ ಮನೆಯ ಪಕ್ಕದಲ್ಲಿದ್ದ ಕೊಠಡಿಯಲ್ಲಿ ಮೃತ ದೇಹವನ್ನು ನೇತು ಹಾಕಿ ಪರಾರಿಯಾಗಿದ್ದಾರೆ ಎಂದು ಗ್ರಾಮಾಂತರ ಠಾಣೆಯಲ್ಲಿ ಮೃತಳ ಕುಟುಂಬಸ್ಥರು ದೂರು ನೀಡಿದ್ದರೂ ಸಹ ಪೊಲೀಸರು ಕ್ರಮ‌ಕೈಗೊಂಡಿಲ್ಲ ಎಂದು ಹೆತ್ತವರು ಆರೋಪಿಸಿದರು.

ಒಟ್ಟಿನಲ್ಲಿ ಬಾಳಿ ಬದುಕಬೇಕಾಗಿರುವ ನವ ವಿವಾಹಿತೆ ವರದಕ್ಷಿಣೆ ಭೂತಕ್ಕೆ ಬಲಿಯಾಗಿರುವುದು ದುರಾದೃಷ್ಟವೇ ಎನ್ನಬಹುದು. ವರದಕ್ಷಿಣಿ ಪಿಡುಗಿಗೆ ಎನ್ನೆಷ್ಟು ಮಂದಿ ಬಲಿಯಾಗಬೇಕೋ

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page