ಎಕ್ಸ್ಲುಸೀವ್ನಮ್ಮೂರುಹುಬ್ಬಳ್ಳಿ

“ರೌಡಿ ಶೀಟರ್” ಪಟ್ಟವನ್ನೇ ಬಂಡವಾಳ ಮಾಡಿಕೊಂಡು ‘ಡೀಲ್”ಗೆ ಇಳಿದ “ಖಾಕಿ”

Spread the love

ಹುಬ್ಬಳ್ಳಿ: ಕಳೆದ ಎರಡು ವರ್ಷಗಳಿಂದ ಬಾಲ ಮುದುಡಿಕೊಂಡು ಮಲಗಿದ್ದ ಬೆಕ್ಕುಗಳು ಮತ್ತೆ ಮ್ಯಾಂವ ಮ್ಯಾಂವ ಎನ್ನಲು ಶುರು ಮಾಡಿದ್ದು ನಗರದ ಕೆಲವು ಕಡೆಗಳಲ್ಲಿ ಯಾರಿಗೂ ಗೊತ್ತಾಗದ ಹಾಗೆ ಹಾಲು ಕುಡಿಯಲು ಶುರು ಮಾಡಿವೆ.

ನಗರದಲ್ಲಿ ಹಲವು ವರ್ಷಗಳಿಂದ ರೌಡಿ ಪಟ್ಟ ಹೊತ್ತುಕೊಂಡು ತಿರುಗುತ್ತಿರುವ ಕೆಲವೊಂದಿಷ್ಟು ಪುಡಿ ರೌಡಿಗಳನ್ನು ರೌಡಿ ಪಟ್ಟದಿಂದ ತೆಗೆಯಲು ಈಗಾಗಲೇ ಕೆಲವೊಂದಿಷ್ಟು ಕಿರಿಯ ಬೆಕ್ಕುಗಳು ಹಿರಿಯ ಮುದಿ ಬೆಕ್ಕಿನ ಜೊತೆ ಸೇರಿಕೊಂಡು ಸಭೆಯನ್ನು ನಡೆಸಿ ಪೀಲ್ಡ್’ಗೆ ಇಳಿದಿವೆ.

ರೌಡಿಗಳ ಲೇವೆಲ್ ಮೇಲೆ ಅವರ ತಲೆಗಿಷ್ಟು ಹಣ ಫಿಕ್ಸ್ ಮಾಡಿ ನಿಮ್ಮನ್ನು ರೌಡಿ ಲೀಸ್ಟ್ ನಿಂದ ಕೈ ಬಿಡುತ್ತೇವೆ ನಮಗೆ ಇಂತಿಷ್ಟು ಲೀಟರ್ ಹಾಲು ಕುಡಿಸಿ ಎಂದು ನಾಲ್ಕು ಕಣ್ಣಿನ ಬೆಕ್ಕೊಂದು ಕೇಶ್ವಾಪುರದ ಮನೆಯಿಂದಲೇ ಈಗಾಗಲೇ ಡೀಲಿಂಗ್ ನಡೆಸಲು ಬಳಸುತ್ತಿರೋ ಮ್ಯಾಂವ ಮ್ಯಾಂವ ಎನ್ನುತ್ತಿರುವ ಸದ್ದು ಗಬ್ಬುರು ವರೆಗೂ ಕೇಳುತ್ತಿದೆ.

ಈಗಾಗಲೇ ರೌಡಿ ಶೀಟರ್ ಹಣೆ ಪಟ್ಟಿಯನ್ನು ಹೊತ್ತಿದ್ದರು ಕೂಡಾ ಹಲವು ವರ್ಷಗಳಿಂದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದ ರೌಡಿಗಳನ್ನು ಲೀಸ್ಟ್ ನಿಂದ ತೆಗೆಯಲು ಹೇಳಿದ್ದನೆ ಬಂಡವಾಳ ಮಾಡಿಕೊಂಡಿರುವ ಬೆಕ್ಕುಗಳು ಹಾಲು ಕುಡಿಯಲು ಮುಂದಾಗಿವೆ ಅಂತಾ ಹೇಳಲಾಗುತ್ತಿದೆ.

ಸದ್ಯ ಈ ಕಳ್ಳಬೆಕ್ಕುಗಳ ಅಸಲಿಯತ್ತು ವೆಂಕಟ “ರಮನ್”ನ ಸನ್ನಿಧಿಗೆ ಹೋಗಿ ಬಿದ್ದರೆ ಅವುಗಳ ಪರಿಸ್ಥಿತಿ ಅ…..ಸುಟ್ಟ ಬೆಕ್ಕಿನಂತಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page