ನಮ್ಮೂರುಶಿಕ್ಷಣ

ಮಹಾಂತ ಮಹಾವಿದ್ಯಾಲಯದಲ್ಲಿ ಪತ್ರಿಕಾ ದಿನಾಚರಣೆ.

Spread the love

ಧಾರವಾಡದ ರಾಯಪೂರ ದಲ್ಲಿರುವ ಮಹಾಂತ ಮಹಾವಿದ್ಯಾಲಯದಲ್ಲಿ ಇಂದು ಪತ್ರಿಕೋದ್ಯಮ ವಿಭಾಗ ಮತ್ತು ಐ ಕ್ಯೂ ಏ ಸಿ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆಯನ್ನು ಆಚರಿಸಲಾಯಿತು .ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದಾರವಾಡದ ಹಿರಿಯ ಪತ್ರಕರ್ತರು ಹಾಗೂ ಕ .ವಿ .ವಿ ಯ ವಿದ್ಯುನ್ಮಾನ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿರುವ ಡಾ .ವೆಂಕನಗೌಡ ಪಾಟೀಲ್ ಪತ್ರಿಕಾ ದಿನಾಚರಣೆಯ ಕುರಿತು ಮಾತನಾಡುತ್ತಾ ,ಸ್ವತಂತ್ರ ಪೂರ್ವ ಹಾಗೂ ಸ್ವಾತಂತ್ರ್ಯಾ ನಂತರದ ಪತ್ರಿಕೋದ್ಯಮದ ಸ್ಥಿತಿಗತಿಗಳ ಕುರಿತು ವಿವರಿಸಿದರು. ಈ ದಿನ ಮಹತ್ವದ ದಿನ,ನಮ್ಮನ್ನು ನಾವು ಅವಲೋಕನ ಮಾಡಿಕೊಳ್ಳುವ ದಿನ. ಉತ್ತಮ ಸಮಾಜ ರೂಪಿಸುವಲ್ಲಿ ಶಿಕ್ಷರ ರು ಮತ್ತು ಪತ್ರಕರ್ತ ರ ಪಾತ್ರ ಅತ್ಯಂತ ಮಹತ್ವದ್ದು. ಆರೋಗ್ಯಕರ ಸಮಾಜ ರೂಪಿಸುವಲ್ಲಿ ಪತ್ರಕರ್ತರ ಪಾತ್ರ ಹಿರಿದಾದದ್ದು. ಪತ್ರಕರ್ತ ನಿಸ್ವಾರ್ಥತೆಯಿಂದ ಹಾಗೂ ಬದ್ಧತೆಯಿಂದ ಕೆಲಸ ಮಾಡಬೇಕು. ಸಮಾಜದ ಬದಲಾವಣೆಗೆ ಸ್ಪಂದಿಸುವ ಪತ್ರ ಕರ್ತ,ದೇಶದ ಅಭವೃದ್ಧಿಗಾಗಿ ತನ್ನನ್ನು ಮೀಸಲಿಡಬೇಕು.ವಿದ್ಯಾರ್ಥಿಗಳು ಓದು,ಬರವಣಿಗೆಯತ್ತ ಗಮನಹರಿಸಿ,ಮಾಧ್ಯಮದಲ್ಲಿ ವಿಫುಲ ಅವಕಾಶಗಳಿವೆ. ಸಿಟಿಜನ್ ಪತ್ರಿಕೋಧ್ಯಮದತ್ತ ಆಸಕ್ತಿ ಬೆಳೆಯಿಸಿಕೊಳ್ಳಿ ಎನ್ನುತ್ತಾ ಪತ್ರಿಕೋಧ್ಯಮ ಪ್ರಜಾಪ್ರಭುತ್ವದ ಪ್ರಭಲ ಮಾಧ್ಯಮವಾಗಿದ್ದರ ಕುರಿತು ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಮಹಾವಿಧ್ಯಾಲಯದ ಪ್ರಾಚಾರ್ಯರಾದ ಡಾ .ಶಾಂತ ಯ್ಯ ಅವರು ಪತ್ರಿಕೆ ಸಾಮಾಜಿಕ ಬದಲಾವಣೆಯ ಪ್ರಮುಖ ಸಾಧನ .ವಿಧ್ಯಾರ್ಥಿ ಗಳು ಪತ್ರಿಕೆಗಳನ್ನು ಓದುವ ಹವ್ಯಾಸಯ.ರೂಢಿಸಿಕೊಳ್ಳಿ.ಸುಶಿಕ್ಷಿತ ಸಮಾಜ ರೂಪಿಸುವಲ್ಲಿ ಪತ್ರಿಕೆಗಳು ಸದಾ ಮುಂಚೂಣಿಯಲ್ಲಿವೆ ಎಂದರು.ಕಾರ್ಯಕ್ರಮದಲ್ಲಿ ವಿಧ್ಯಾರ್ಥಿ ಪ್ರಶಾಂತ್ ಪ್ರಾರ್ಥಿಸಿದರು.ವಿಧ್ಯಾರ್ಥಿ ನಾರಾಯಣ್ ಶೇಷ ಸ್ವಾಗತಿಸಿದರು. ಪತ್ರಿ ಕೋಧ್ಯಮದ ವಿಭಾಗದ ಮುಖ್ಯಸ್ಥ ರಾದ ಜಯಲಕ್ಷ್ಮಿ. ಯೆಂಡಿಗೆರಿ ಕಾರ್ಯಕ್ರಮದ ಪ್ರ ಸ್ತುತತೆಯ ಕುರಿತು ಮಾತನಾಡಿದರು.ಕುಮಾರಿ ಐಶ್ವರ್ಯ ಅತಿಥಿಗಳನ್ನು ಪರಿಚಯಿಸಿದರು.ವೇದಿಕೆಯಲ್ಲಿ ವಿಧ್ಯಾರ್ಥಿ ಒಕ್ಕೂಟದ ಚೇರ್ಮನ್ ರಾದ ಶ್ರೀಮತಿ ಏಮ.ಬೀ ಅಳಗವಾಡಿ,ಐ . ಕ್ಯೂ ಏ.ಸಿ ಸಂಯೋಜಕರಾದ ಶ್ರೀಮತಿ ಸಿ ಕೆ ಹುಬ್ಬಳ್ಳಿ, ವಿಧ್ಯಾರ್ಥಿ ಕಾರ್ಯದರ್ಶಿ ಗಳಾದ ಕುಮಾರಿ ಲಕ್ಷ್ಮಿ ಪಾಟೀಲ್.ಹಾಗೂ.ಭಾಗ್ಯಲಕ್ಷ್ಮಿ ,ಸಿಬ್ಬಂದಿ ವರ್ಗ ಹಾಗೂ ವಿಧ್ಯಾರ್ಥಿ ಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page