ಹುಬ್ಬಳ್ಳಿ- ಧಾರವಾಡ
ಹುಬ್ಬಳ್ಳಿಯ “ಹುಂಡೈ” ಶೋರೂಮ್ ಬಳಿ ಭೀಕರ ರಸ್ತೆ ಅಪಘಾತ, ಆಟೋ ನುಜ್ಜುಗುಜ್ಜು
ಹುಬ್ಬಳ್ಳಿ:ಕುಸುಗಲ್ ರಸ್ತೆಯ ಹುಂಡೈ ಶೋರುಮ್ ಬಳಿಯಲ್ಲಿ ಕಾರು ಹಾಗೂ ಅಟೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಅಟೋ ಸಂಪೂರ್ಣವಾಗಿ ಜಖಂಗೊಂಡು ಅಟೋ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಈಗಷ್ಟೇ ನಡೆದಿದೆ.
ಕುಸುಗಲ್ ಗ್ರಾಮದ ಅಟೋ ಚಾಲಕ ಸಮೀರ್ ಬೆಟಗೇರಿ ಎಂಬಾತ ಕುಸುಗಲ್ ಗ್ರಾಮದಿಂದ ತನ್ನ ತಾಯಿಯನ್ನು ಆಟೋದಲ್ಲಿ ಹುಬ್ಬಳ್ಳಿಗೆ ಬಿಟ್ಟು ಮರಳಿ ಕುಸುಗಲ್ ಗ್ರಾಮದತ್ತ ಹೋಗುತ್ತಿದ್ದಾಗ ಎದುರಿಗೆ ಅತಿ ಜೋರಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಅಟೋ ಸಂಪೂರ್ಣವಾಗಿ ಜಖಂಗೊಂಡು ಸಮೀರ್ ಗಂಭೀರವಾಗಿ ಗಾಯಗೊಂಡಿದ್ದಾನೆ.
ಕೂಡಲೇ ಸ್ಥಳೀಯರ ಸಹಾಯದಿಂದ ಆತನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನೆ ಮಾಡಲಾಗಿದ್ದು, ಘಟನಾ ಸ್ಥಳಕ್ಕೆ ಹುಬ್ಬಳ್ಳಿಯ ಪೂರ್ವ ಸಂಚಾರಿ ಠಾಣೆಯ ಪೊಲೀಸರು ಭೇಟಿಯನ್ನು ನೀಡಿ ಪರಿಶೀಲನೆ ನಡೆಸಿದ್ದಾರೆ.